- Advertisement -
![]()
- Advertisement -
ಉಡುಪಿ: ಬೈಕ್ ಗೆ ಕಾರು ಢಿಕ್ಕಿಯಾಗಿ ಮೂವರಿಗೆ ಗಾಯಗಳಾಗಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ಸೆ. 24ರಂದು ರಾತ್ರಿ ಆತ್ರಾಡಿಯ ಸುಧಾಕರ ಪೂಜಾರಿ ದಂಪತಿ ತಮ್ಮ ಪುತ್ರಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈಶ್ವರ ನಗರ 2ನೇ ಮುಖ್ಯ ರಸ್ತೆ ಜಂಕ್ಷನ್ ಬಳಿಯು ಟರ್ನ್ ಮಾಡುವಾಗ ಪರ್ಕಳ ಕಡೆಯಿಂದ ಅತೀವೇಗದಲ್ಲಿ ಆಗಮಿಸಿದ ಕಾರಿನ ಚಾಲಕ ಎಚ್.ವಿಷ್ಣು ಎಂಬವರು ಬೈಕ್ ಗೆ ಢಿಕ್ಕಿ ಹೊಡೆದಿದ್ದಾರೆ. ಈ ವೇಳೆ ದ್ವಿಚಕ್ರ ವಾಹನದಲ್ಲಿದ್ದ ಮೂವರೂ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


