- Advertisement -
![]()
- Advertisement -
ಚಂಢೀಗಢ: 60 ವರ್ಷಗಳಿಗಿಂತಲೂ ಹೆಚ್ಚು ಕಾಲ ಭಾರತೀಯ ವಾಯುಪಡೆಯ ಬಲವಾಗಿದ್ದ, ಮಿಗ್ 21 ಫೈಟರ್ ಜೆಟ್ ವಿಮಾನಗಳಿಗೆ ಇಂದು ಅಂತಿಮ ವಿದಾಯ ಹೇಳಲಾಗಿದೆ.
ರಷ್ಯಾ ನಿರ್ಮಿತ ಮಿಗ್-21 ಯುದ್ಧ ವಿಮಾನಗಳು 1965 ಮತ್ತು 1971ರ ಪಾಕಿಸ್ತಾನ ವಿರುದ್ಧದ ಯುದ್ಧ ಹಾಗೂ 1999ರ ಕಾರ್ಗಿಲ್ ಯುದ್ಧದಲ್ಲಿ ಪ್ರಧಾನ ಪಾತ್ರ ವಹಿಸಿದ್ದವು.
ಅಲ್ಲದೇ, 2019ರಲ್ಲಿ ನಡೆದಿದ್ದ ಬಾಲಾಕೋಟ್ ವಾಯು ದಾಳಿಯಲ್ಲಿಯೂ ಮಿಗ್ 21 ವಿಮಾನಗಳು ಮಹತ್ವದ ಪಾತ್ರ ವಹಿಸಿದ್ದವು.ಚಂಡೀಗಢದ ವಾಯುನೆಲೆಯಲ್ಲಿ ನಡೆದ ವಿದಾಯ ಸಮಾರಂಭದಲ್ಲಿ
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಿಡಿಎಸ್ ಅನಿಲ್ ಚೌಹಾಣ್, ಭೂ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ವಾಯು ಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಹಾಗೂ ನೌಕಾ ಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಭಾಗಿಯಾಗಿದ್ದರು.
- Advertisement -


