Sunday, June 7, 2026
Homeಕರಾವಳಿಮಂಗಳೂರುಬೆಳ್ತಂಗಡಿ : ತಿಮರೋಡಿ ಮನೆಯಲ್ಲಿ ತಲವಾರು & ಬಂದೂಕು ಪತ್ತೆ ಪ್ರಕರಣ: ಇಂದೂ ಕೂಡ ತಿಮರೋಡಿ...

ಬೆಳ್ತಂಗಡಿ : ತಿಮರೋಡಿ ಮನೆಯಲ್ಲಿ ತಲವಾರು & ಬಂದೂಕು ಪತ್ತೆ ಪ್ರಕರಣ: ಇಂದೂ ಕೂಡ ತಿಮರೋಡಿ ಠಾಣೆಗೆ ಹಾಜರಾಗುವುದು ಡೌಟ್

- Advertisement -
- Advertisement -

ಬೆಳ್ತಂಗಡಿ : ಎಸ್.ಐ.ಟಿ ದಾಳಿ ವೇಳೆ ತಿಮರೋಡಿ ಮನೆಯಲ್ಲಿ ಎರಡು ತಲವಾರು ಮತ್ತು ಒಂದು ಬಂದೂಕು ಪತ್ತೆಯಾದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಉಜಿರೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಸೆ.16ರಂದು ಪ್ರಕರಣ ದಾಖಲಾಗಿದ್ದು. ಈ ಸಂಬಂಧ ವಿಚಾರಣೆಗಾಗಿ ಎರಡು ಬಾರಿ ಬೆಳ್ತಂಗಡಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.

ಮೊದಲು ನೋಟಿಸ್ ಸೆ.21 ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದ್ರೆ ಅಂದೂ ಕೂಡ ಕಾರಣ ನೀಡಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿಗೆ ಸೆ.25 ರಂದು ವಿಚಾರಣೆಗೆ ಹಾಜರಾಗಲು ಮತ್ತೊಂದು ನೋಟಿಸ್ ಜಾರಿ ಮಾಡಿದ್ದರು. ಆದ್ರೆ ಇಂದಿನ ವಿಚಾರಣೆಗೂ ಹಾಜರಾಗುವುದು ಬಹುತೇಕ ಡೌಟ್ ಎನ್ನಲಾಗಿದೆ.

ಇಂದಿನ ವಿಚಾರಣೆಗೆ ಹಾಜರಾಗದಿದ್ದಲ್ಲಿ ಮೂರನೇ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಪೊಲೀಸರು ಕರೆಯುವ ಸಾಧ್ಯತೆ ಇದೆ. ಸದ್ಯ ಒಂದು ಕಡೆ ಬಂದೂಕು ಪ್ರಕರಣ ಮತ್ತೊಂದು ಒಂದು ವರ್ಷ ಕಡೆ ಗಡಿಪಾರು ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಒಂದು ವಾರಗಳಿಂದ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ.

- Advertisement -

Latest News

error: Content is protected !!