Saturday, October 10, 2026
Homeಕರಾವಳಿಉಡುಪಿಅಶ್ಲೀಲ ವೀಡಿಯೋ ಪೋಸ್ಟ್, ಉಡುಪಿ ಮೂಲದ ಯುವಕ ಬೆಂಗಳೂರಿನಲ್ಲಿ ಅರೆಸ್ಟ್...

ಅಶ್ಲೀಲ ವೀಡಿಯೋ ಪೋಸ್ಟ್, ಉಡುಪಿ ಮೂಲದ ಯುವಕ ಬೆಂಗಳೂರಿನಲ್ಲಿ ಅರೆಸ್ಟ್…

- Advertisement -
- Advertisement -

ಬೆಂಗಳೂರು : ಮಕ್ಕಳ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದ ಅಂತಾರಾಜ್ಯ ಮಟ್ಟದ ದಂಧೆಕೋರನನ್ನು ಸಿಐಡಿ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಮೂಲದ ಸೌರವ್ ಶೆಟ್ಟಿ (21) ಬಂಧಿತ ಆರೋಪಿ. ಆರೋಪಿಯಿಂದ 7 ಜಿಬಿ ಅಶ್ಲೀಲ ವಿಡಿಯೋ ಜಪ್ತಿ ಮಾಡಲಾಗಿದೆ. ಎಂಬಿಎ ಪದವೀಧರನಾಗಿರುವ ಆರೋಪಿ ಬೆಂಗಳೂರಿನಲ್ಲಿ ನೆಲೆಸಿದ್ದು ಮಕ್ಕಳ ಲೈಂಗಿಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ಮೂಲಕ ಆಸಕ್ತರಿಗೆ ವಿಡಿಯೋ ಲಿಂಕ್ ಕಳುಹಿಸುತ್ತಿದ್ದ. ಈ ಮೂಲಕ ಹಣ ಸಂಪಾದಿಸುತ್ತಿದ್ದ.

ಈತನೊಂದಿಗೆ ಬೇರೆ ರಾಜ್ಯಗಳ 10 ಮಂದಿ ದಂಧೆಕೋರರು ಭಾಗಿಯಾಗಿರುವುದು ಗೊತ್ತಾಗಿದೆ. ಇದೊಂದು ವ್ಯವಸ್ಥಿತ ಜಾಲವಾಗಿದ್ದು, ಕೇಂದ್ರ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋದ ಟೆಪ್ ಲೈನ್ ಮೂಲಕ ರಾಜ್ಯದ ವ್ಯಕ್ತಿಯೊಬ್ಬ ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ದೃಶ್ಯಗಳನ್ನು ಪೋಸ್ಟ್ ಮಾಡುತ್ತಿರುವ ಬಗ್ಗೆ ಮಾಹಿತಿ ಗೊತ್ತಾಗಿದೆ. ಸಿಐಡಿ ಪೊಲೀಸರು ಈ ಬಗ್ಗೆ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!