- Advertisement -
![]()
- Advertisement -
ಬೆಳ್ತಂಗಡಿ : ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಆ ಪ್ರಯುಕ್ತ ಸಂಘದ ವತಿಯಿಂದ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಸೆ.14 ರಂದು ಕಂಪ್ಯೂಟರ್ ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷರಾದ ಶ್ರೀ ರಮೇಶ್ ಗೌಡ, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಸಚಿನ್ ಕುಮಾರ್, ಉಪಾಧ್ಯಕ್ಷರಾದ ಸೂರ್ಯನಾರಾಯಣ ಹೊಳ್ಳ, ನಿರ್ದೇಶಕರುಗಳಾದ ಶಿವಪ್ರಸಾದ್, ರಾಧಾಕೃಷ್ಣ,ಮಂಜುನಾಥ್,ಶ್ರೀನಿವಾಸ, ಪುಷ್ಪಲತಾ, ಗೀತಾ, ದೇಜಪ್ಪ ಪೂಜಾರಿ ಹಾಗೂ ಸಂಘದ ಸಹಾಯಕಿ ಶ್ರೀಮತಿ ಸಂಧ್ಯಾ ಉಪಸ್ಥಿತರಿದ್ದರು..
- Advertisement -


