- Advertisement -
![]()
- Advertisement -
ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಸೆ.6 ರಂದು ಸಂಜೆ ಹಾಜರುಪಡಿಸಿ ವೇಳೆ ಆತನ ಪರ ಹಾಜರಾಗಿದ್ದ ವಕೀಲರು ಜಾಮೀನು ಅರ್ಜಿ ಇಂದು ಸಲ್ಲಿಕೆ ಮಾಡಿದ್ದಾರೆ.
ಜಾಮೀನು ಅರ್ಜಿಗೆ ಎಸ್.ಐ.ಟಿ ಪರ ವಕೀಲರು ವಿರೋಧ ವ್ಯಕ್ತಪಡಿಸಿದ್ದು ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಸೆ.9 ಕ್ಕೆ ಮುಂದೂಡಿದೆ.
ಚಿನ್ನಯ್ಯ ಪರ ಮಂಗಳೂರು ಉಚಿತ ಕಾನೂನು ಸೇವೆಗಳ ಪ್ರಾಧಿಕಾರದಿಂದ ನೇಮಿಸಿದ ವಕೀಲರು ಇಂದು ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಿದ್ದರು. ಚಿನ್ನಯ್ಯನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು ಶಿವಮೊಗ್ಗೆ ಜೈಲಿಗೆ ಕಳುಹಿಸಿದ್ದಾರೆ.
- Advertisement -


