Friday, June 5, 2026
HomeUncategorizedಪುತ್ತೂರು: ಅಂಬಿಕಾದ ವಿದ್ಯಾರ್ಥಿಗಳು ಈಜು ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ಅಂಬಿಕಾದ ವಿದ್ಯಾರ್ಥಿಗಳು ಈಜು ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

- Advertisement -
- Advertisement -

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪುತ್ತೂರಿನ ಎಂ ನರಸಿಂಹ ಶೆಣೈ ಮತ್ತು ಶ್ರೀಲಕ್ಷ್ಮೀ ಶೆಣೈ ದಂಪತಿ ಪುತ್ರಿ ಪ್ರತೀಕ್ಷಾ ಯನ್. ಶೆಣೈ ೫೦ ಮೀಟರ್ ಬ್ರೆಸ್ಟ್ ಸ್ಟ್ರೋಕ್, ೧೦೦ ಮೀಟರ್ ಬ್ರೆಸ್ಟ್ ಸ್ಟ್ರೋಕ್, ೨೦೦ ಮೀಟರ್ ಬ್ರೆಸ್ಟ್ ಸ್ಟ್ರೋಕ್ ಗಳಲ್ಲಿ ಚಿನ್ನ, ೪x೧೦೦ ಫ್ರೀ ಸ್ಟೈಲ್ ರಿಲೇ ಹಾಗೂ ೪x೧೦೦ ಮಿಡ್ಲೇ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿರುತ್ತಾರೆ.

ಇನ್ನೋರ್ವ ವಿದ್ಯಾರ್ಥಿ, ಪುತ್ತೂರಿನ ಡಾ. ದೀಪಕ್ ರೈ ಮತ್ತು  ವಜ್ರಾಕ್ಷಿ ಡಿ. ರೈ ದಂಪತಿ ಪುತ್ರ ಪ್ರಥಮ ಪಿಯುಸಿಯ ವಿದ್ಯಾರ್ಥಿ ವರ್ಧಿನ್ ಡಿ. ರೈ ೫೦ ಮೀಟರ್ ಬ್ರೆಸ್ಟ್ ಸ್ಟ್ರೋಕ್,, ೧೦೦ ಮೀಟರ್ ಬ್ರೆಸ್ಟ್ ಸ್ಟ್ರೋಕ್ ಗಳಲ್ಲಿ ಚಿನ್ನ, ೫೦ ಮೀಟರ್ ಬಟರ್ ಫ್ಲೇ ನಲ್ಲಿ ಬೆಳ್ಳಿ, ೪x೧೦೦ ಫ್ರೀ ಸ್ಟೈನಲ್ಲಿ ಚಿನ್ನ, ೪x೧೦೦ ಮಿಡ್ಲೇ ರಿಲೇ ಯಲ್ಲಿ ಬೆಳ್ಳಿ ಪದಕ ವಿಜೇತರಾಗಿ ಕೀರ್ತಿ ತಂದಿರುತ್ತಾರೆ. ಈ ಇಬ್ಬರೂ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಸ್ರರ್ಧೆಗೆ ಆಯ್ಕೆಯಾಗಿರುತ್ತಾರೆ.

- Advertisement -

Latest News

error: Content is protected !!