ಮಂಗಳೂರು; ಕಾವೂರು ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು ಬೊಲ್ಪುಗುಡ್ಡೆ ಗ್ರಾಮದಲ್ಲಿ ಅಂದರ್ ಬಾಹರ್ ಆಡುತ್ತಿದ್ದ 17 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ದಿನಾಂಕ 30-08-2025 ರಂದು ರಾತ್ರಿ 11-30 ವೇಳೆಗೆ ಸಹಾಯಕ ಪೊಲೀಸ್ ಆಯುಕ್ತರು ಉತ್ತರ ಉಪ ವಿಭಾಗರವರ ಮಾಹಿತಿಯಂತೆ ಕಾವೂರು ಪೊಲಿಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಮಲ್ಲಿಕಾರ್ಜುನ ಬಿರಾದಾರರವರು ಸಿಬ್ಬಂದಿಯೊಂದಿಗೆ ಮನೆಯೊಂದರ ಮೇಲೆ ದಾಳಿ ಮಾಡಿದಾಗ ಅಂದರ್ ಬಾಹರ್ ಆಟದಲ್ಲಿ ತೊಡಗಿರೋದು ಗೊತ್ತಾಗಿದೆ. ಅದರಂತೆ ಸ್ಥಳದಲ್ಲಿ ಆಟದಲ್ಲಿ ತೊಡಗಿದ್ದ 17 ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳ ವಿವರ;
1) ದಿಕ್ಷೀತ್ (31) ದೇರೆಬೈಲ್ ಕೊಂಚಾಡಿ 2) ದಯಾನಂದ (40) ಕೊಂಚಾಡಿ 3) ರಾಘವೇಂದ್ರ (41) ದೆರೆಬೈಲ್ ಕೊಂಚಾಡಿ ಯಯ್ಯಾಡಿ ಅಂಚೆ 4), ವೈಶಾಕ್ ಶೆಟ್ಟಿ (25) ಯಯ್ಯಾಡಿ 5) ಪ್ರವೀಣ್ ಕುಮಾರ್ (40) ಫರಂಗಿ ಪೇಟೆ 6) ಶಾಹುಲ್ ಹಮೀದ್ (50) ಕಾಪು 7) ತಿಲಕ್ ರಾಜ್ (31) ನಡುಗೋಡು ಕಟೀಲು ಬಜಪೆ, 8) ಜಯಾನಂದ್ ಎಸ್ (44) ವಾಮಂಜೂರು 9) ಉಮೇಶ್ (41) ದೇರೆಬೈಲ್ ಕೊಂಚಾಡಿ 10) ಗೌತಮ್ (32) ದೇರೆಬೈಲ್ ಕೊಂಚಾಡಿ 11) ಲಾರೆನ್ಸ್ ರಾಜಾ ಡಿ ಸೋಜಾ (48) ಕೂಳೂರು 12) ಇನಸ್ ಡಿಸೋಜಾ ಹೊಯ್ಗೆ ಗದ್ದೆ ಉಲ್ಲಾಳ 13) ಮುಹಮ್ಮದ್ ಅಶ್ರಫ್ ಉಲ್ಲಾಳ ಬೈಲ್ 14) ಮೊಹಮ್ಮದ್ ಫಯಾಜ್ (42) ಪೆರ್ಮನೂರ್ 15) ಮುಸ್ತಾಫಾ (61) ಉಲ್ಲಾಳ 16) ಸುನೀಲ್ ಡಿಸೋಜಾ (41) ಅಡಮ್ ಕುದ್ರು ಪಡಪು 17) ಕಣ್ಣನ್ (42) ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು ಆರೋಪಿಗಳಿಂದ ಒಟ್ಟು 1,92,000/- ರೂ ನಗದು ಹಣ ಹಾಗೂ 18 ಮೊಬೈಲ್ ಫೋನ್ ಗಳನ್ನು ಸ್ವಾಧೀನಾಪಡಿಸಿಕೊಂಡಿದ್ದು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 4,00,000/- ರೂಗಳು ಎಂದು ಅಂದಾಜಿಸಲಾಗಿದೆ. ಆರೋಪಿಗಳು ಹಾಗೂ ಮನೆ ಮಾಲೀಕರು ಮತ್ತು ಬಾಡಿಗೆದಾರರ ವಿರುದ್ದ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


