Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಸಸಿಹಿತ್ಲು ಮೂಂಡಾ ಬೀಚ್‌ನಲ್ಲಿ ಯುವಕ ಸಮುದ್ರಪಾಲು

ಮಂಗಳೂರು; ಸಸಿಹಿತ್ಲು ಮೂಂಡಾ ಬೀಚ್‌ನಲ್ಲಿ ಯುವಕ ಸಮುದ್ರಪಾಲು

- Advertisement -
- Advertisement -

ಮಂಗಳೂರು; ಸಮುದ್ರಕ್ಕೆ ಇಳಿದಿದ್ದ ನಾಲ್ವರು ಯುವಕರ ಪೈಕಿ ಓರ್ವ ಸಮುದ್ರಪಾಲಾಗಿರುವ ಘಟನೆ ಸಸಿಹಿತ್ಲು ಮೂಂಡಾ ಬೀಚ್‌ನಲ್ಲಿ ಭಾನುವಾರ ಸಂಜೆ ನಡೆದಿದೆ. ಮೂವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ ಎಂದು

ಪಡುಪಣಂಬೂರು ಕಜಕತೋಟ ನಿವಾಸಿ, ದಿವಂಗತ ಅನ್ವರ್‌ ಅವರ ಪುತ್ರ ಮುಹಮ್ಮದ್‌ ಸಮೀರ್‌ (23) ಮೃತಪಟ್ಟ ಯುವಕ. ಐಮಾನ್‌ (23), ರಯೀಸ್‌ (22), ಹಳೆಯಂಗಡಿ ಬೋಳ್ಳೂರಿನ ನಿವಾಸಿ ಫಾಝಿಲ್‌ ಎಂಬುವವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.

ಭಾನುವಾರ ಸಂಜೆ  ವಾಯುವಿಹಾರಕ್ಕೆಂದು ಸಸಿಹಿತ್ಲು ಬೀಚ್‌ಗೆಂದು ನಾಲ್ವರು ಸ್ನೇಹಿತರು ಬಂದಿದ್ದು, ನೀರಿಗಿಳಿದು ಆಟವಾಡುತ್ತಿದ್ದಾಗ, ದೊಡ್ಡ ಅಲೆಯೊಂದು ನಾಲ್ವರನ್ನೂ ಸಮುದ್ರದೊಳಗೆ ಸೆಳೆದುಕೊಂಡಿದೆ. ಕೂಡಲೇ ಎಲ್ಲರೂ ಸಹಾಯಕ್ಕಾಗಿ ಕಿರುಚಿದ್ದಾರೆ. ಕೂಡಲೇ ಸಮೀಪದಲ್ಲಿ ಇದ್ದ ಸ್ಥಳೀಯ ಮೀನುಗಾರರು ದೋಣಿಯ ಸಹಾಯದಿಂದ ಮೂವರನ್ನು ರಕ್ಷಣೆ ಮಾಡಿದ್ದಾರೆ. ಆದರೆ ಮುಹಮ್ಮದ್‌ ಸಮೀರ್‌ ಅಷ್ಟರಲ್ಲೇ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.ಘಟನಾ ಸ್ಥಳಕ್ಕೆ ಸುರತ್ಕಲ್‌ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಾಗಿದೆ.



- Advertisement -

Latest News

error: Content is protected !!