- Advertisement -
![]()
- Advertisement -
ಬಂಟ್ವಾಳ: ಸುಳ್ಳ ಮಲೆ ತೀರ್ಥ ಸ್ನಾನಕ್ಕೆ ಪೂರ್ವಭಾವಿಯಾಗಿ ಬಿದಿರಿನ ಕೇರ್ಪು ( ಏಣಿ) ಇಡುವ ಸಂಪ್ರದಾಯವು ಆಗಸ್ಟ್ 23 ಶನಿವಾರದಂದು ನಡೆಯಿತು.
ಸೋಣ ಅಮಾವಾಸ್ಯೆಯಆ. 23 ಶನಿವಾರದಿಂದ ಬಾದ್ರಪದ ಶುಕ್ಲ ಚೌತಿಯ ಆ. 27ನೇ ಬುಧವಾರದವರೆಗೆ ಸುಳ್ಳಮಲೆ ಗುಹಾ ತೀರ್ಥಸ್ನಾನಕ್ಕೆ ಭಕ್ತಾದಿಗಳಿಗೆ ಮುಕ್ತ ಅವಕಾಶ ಇದೆ.
ಈ ನಿಟ್ಟಿನಲ್ಲಿ ಪರಂಪರೆಯಿಂದ ನಡೆದು ಬಂದ ಸಂಪ್ರದಾಯದಂತೆ ಸುಳ್ಳಮಲೆ ಗುಹಾ ತೀರ್ಥಕ್ಕೆ ಪ್ರಾರ್ಥನೆ ಸಲ್ಲಿಸಿ,ಕೇರ್ಪು ಇಟ್ಟು ದಾರ್ಮಿಕ ವಿಧಿ-ವಿದಾನವನ್ನು ನೆರವೇರಿಸಿ ಅರಸು ಶ್ರೀ ಗುಡ್ಡೆಚಾಮುಂಡಿ ಮತ್ತು ಪ್ರಧಾನಿ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ತರು ಸೇರಿದಂತೆ ಊರ ಪರ ಊರಿನ ಭಕ್ತಾದಿಗಳು ಉಪಸ್ತಿತರಿದ್ದರು .
- Advertisement -


