Wednesday, June 24, 2026
Homeಕರಾವಳಿಸದನದಲ್ಲಿ ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾಹಲ 

ಸದನದಲ್ಲಿ ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾಹಲ 

- Advertisement -
- Advertisement -

ಬೆಂಗಳೂರು:  ಗೃಹ ಸಚಿವ ಪರಮೇಶ್ವರ್‌ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ಸುದೀರ್ಘ ಉತ್ತರಕ್ಕೆ ವಿಪಕ್ಷ ನಾಯಕ ಆರ್.‌ಅಶೋಕ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂದು ಹೇಳಿದ್ದು, ಷಡ್ಯಂತ್ರ ಮಾಡಿದವರು ಯಾರು ಎಂಬುದನ್ನು ಸಂದರ್ಭ ಬಂದಾಗ ಹೇಳುತ್ತೇನೆ ಎಂದಿದ್ದಾರೆ. ಹೀಗೆ ಷಡ್ಯಂತ್ರ ಮಾಡಿದವರು ಯಾರು? ಮೊದಲು ಬಹಿರಂಗಪಡಿಸಲಿ ಎಂದು ಪಟ್ಟು ಹಿಡಿದರು. 

ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಮಗೂ ಭಕ್ತಿ, ಗೌರವವಿದೆ. ನಾವು ಯಾರೂ ಕೂಡ ರಾಜಕೀಯ ಮಾಡುತ್ತಿಲ್ಲ. ಬಿಜೆಪಿಯವರು ಧರ್ಮದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

- Advertisement -

Latest News

error: Content is protected !!