Wednesday, June 24, 2026
Homeಪ್ರಮುಖ-ಸುದ್ದಿಮತ್ತೆ ಒಂದಾದ ನಟ ಅಜಯ್ ರಾವ್ ಹಾಗೂ ಸಪ್ನ ರಾವ್ ದಂಪತಿ

ಮತ್ತೆ ಒಂದಾದ ನಟ ಅಜಯ್ ರಾವ್ ಹಾಗೂ ಸಪ್ನ ರಾವ್ ದಂಪತಿ

- Advertisement -
- Advertisement -

ಬೆಂಗಳೂರು: ನಟ ಅಜಯ್ ರಾವ್ ಅವರ ಪತ್ನಿ ಸಪ್ನ ರಾವ್ ಅವರು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದು ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಇದರ ಬೆನ್ನಲ್ಲೇ ನಟ ಅಜಯ್ ರಾವ್ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಮನವಿ ಮಾಡಿದ್ದರು. ಇದೀಗ ಅವರ ಪತ್ನಿ ರಾವ್ ಅವರು ಖುಷಿಯ ಸಮಾಚಾರವನ್ನು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಅವರು ನಾನು ತಾಯಿಯಾಗಿ ಪ್ರತಿದಿನ ನನ್ನ ಮಗಳಿಗೆ ಧೈರ್ಯ ತುಂಬುವ ಕೆಲಸ ಮಾಡ್ತಿದ್ದೇನೆ. ನಾನು‌ ತೀವ್ರವಾಗಿ ಸವಾಲುಗಳನ್ನ ಎದುರಿಸುತ್ತಿದ್ದೇನೆ ಎಂದಿದ್ದಾರೆ.

ನಾನು ನನ್ನ ಮಗಳು ನಮ್ಮ ಬದುಕನ್ನು ಪುನರ್ ನಿರ್ಮಿಸಿಕೊಳ್ಳಲು ಮತ್ತು ದಾಂಪತ್ಯ ಜೀವನವನ್ನ ಸರಿಪಡಿಸಿಕೊಳ್ಳಲು ಪ್ರಾರ್ಥಿಸುತ್ತಿದ್ದೇನೆ. ಇದು ನಮ್ಮ ವಯಕ್ತಿಕ, ಭಾವನಾತ್ಮಕ ಮತ್ತು ದಾಂಪತ್ಯ ಜೀವನಕ್ಕೆ ಸಂಬಂಧಿಸಿದ್ದಾಗಿದೆ ಎಂದು ಸಪ್ನಾ ಹೇಳಿದ್ದಾರೆ. ಆ ಮೂಲಕ ತಾವು ಮತ್ತೆ ಒಂದಾಗುತ್ತಿರೋದಾಗಿ ತಿಳಿಸಿದ್ದು ಅಭಿಮಾನಿಗಳಿಗೆ ಈ ಸುದ್ದಿ ಖುಷಿ ನೀಡಿದೆ.

- Advertisement -

Latest News

error: Content is protected !!