- Advertisement -
![]()
- Advertisement -
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯಲ್ಲಿ ಅತ್ಯಂತ ಮಹತ್ವದ ಬೆಳವಣಿಗೆ ನಡೆದಿದ್ದು ಆ.11 ರಂದು ಮಧ್ಯಾಹ್ನ 2:45 ಕ್ಕೆ ಜಿ.ಪಿ.ಆರ್ ಯಂತ್ರವನ್ನು ಉಪಯೋಗಿಸಿ ತನಿಖೆ ಆರಂಭಿಸಿದೆ.
ಎಸ್.ಐ.ಟಿ ತಂಡ ಜಿ.ಪಿ.ಆರ್ ತಜ್ಞರ ತಂಡ ಸಾಕ್ಷಿ ದೂರುದಾರ ಗುರುತಿಸಿದ 13ನೆಯ ಸ್ಥಳದಲ್ಲಿ ಜಿ.ಪಿ.ಆರ್ ಯಂತ್ರದಿಂದ ಪರಿಶೀಲನೆಗೆ ಸಿದ್ಧತೆಗಳು ನಡೆದಿದ್ದು ಜಿಪಿಆರ್ ಯಂತ್ರವನ್ನು ನೇತ್ರಾವತಿ ಸ್ನಾನಘಟ್ಟದ ಸಮೀಪ ಗುರುತಿಸಿದ 13ನೆಯ ಸ್ಥಳಕ್ಕೆ ತರಲಾಗಿದ್ದು ಕಾರ್ಯಾಚರಣೆ ಆರಂಭಿಸಿದ್ದಾರೆ.
- Advertisement -


