- Advertisement -
![]()
- Advertisement -
ಕೇರಳದ ದಾದಿ ನಿಮಿಷಾ ಪ್ರಿಯಾ ಅವರ ಮರಣದಂಡನೆ ಕೈಬಿಡಲಾಗಿದೆ, ಆಕೆ ಶೀಘ್ರವೇ ಬಿಡುಗಡೆಯಾಗುತ್ತಾಳೆ ಎಂದೆಲ್ಲಾ ಹೇಳಿಕೆ ಕೊಡುತ್ತಿರುವವರ ಬಗ್ಗೆ All sides to stay away from misinformation ಎಂದು ಭಾರತ ಸರಕಾರ ಎಚ್ಚರಿಕೆ ನೀಡಿದೆ.
ಕೊಲೆ ಆರೋಪದಲ್ಲಿ ಯೆಮೆನ್ ಜೈಲಿನಲ್ಲಿರುವ ನಿಮಿಷಪ್ರಿಯಾಳ ವಿಷಯದಲ್ಲಿ ಭಾರತ ಸರಕಾರದ ಮಧ್ಯಪ್ರವೇಶದ ಕಾರಣ ಶಿಕ್ಷೆ ಜಾರಿಯಾಗುವುದು ಮುಂದೂಡಲ್ಪಟ್ಟಿದೆ. ಅದು ಮುಂದೂಡಲ್ಪಟ್ಟಿರುವುದು ಅಷ್ಟೇ, ರದ್ದಾಗಿಲ್ಲ. ಮುಂದೂಡಲ್ಪಟ್ಟಿದೆ. ನಿಮಿಷಾ ಪ್ರಿಯಾ ಅವರ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿರುವ ಬಗ್ಗೆ ನಮಗೆ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.
ಇನ್ನು ನಿಮಿಷಾ ಪ್ರಿಯ ಅವರ ಮರಣದಂಡನೆಯ ಮುಂದೂಡುವಿಕೆಯು ಸರಕಾರದ concerted efforts ಕಾರಣದಿಂದಲೇ ಹೊರತು ಬೇರೆ ಯಾರಿಂದಲೂ ಅಲ್ಲ. ಈ ವಿಷಯದಲ್ಲಿ ಇನ್ಯಾರೂ ಕೈಯಾಡಿಸಲೂ ಇಲ್ಲ, ಕೈಯಾಡಿಸುವಂತೆಯೂ ಇಲ್ಲ ಎಂದು ಭಾರತ ಸರಕಾರ ಹೇಳಿದೆ.
- Advertisement -


