- Advertisement -
![]()
- Advertisement -
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 20ನೇ ಕಂತನ್ನು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿ, ಬಿಡುಗಡೆ ಮಾಡಿದ್ದಾರೆ.
ಕಿಸಾನ್ ಸಮ್ಮಾನ್ ನಿಧಿಯ 20ನೇ ಕಂತಿನ 20,000 ಕೋಟಿ ರೋಗಳಿಗೂ ಹೆಚ್ಚಿನ ಮೊತ್ತವನ್ನು 9.7 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದಾರೆ. ಕೇಂದ್ರದ ಯೋಜನೆಗಳಾದ ಪಿಎಂ ಕಿಸಾನ್ ಯೋಜನೆ ಕೋಟ್ಯಾಂತರ ರೈತರಿಗೆ ವಾರ್ಷಿಕ 6000 ರೂಗಳ ಆರ್ಥಿಕ ಪ್ರಯೋಜನವನ್ನು ತಲಾ 2000 ರೂಗಳ ಮೂರು ಸಮಾನ ಕಂತುಗಳಲ್ಲಿ ನೀಡುತ್ತದೆ.
19ನೇ ಕಂತಿನ ಹಣ ಇನ್ನು ಕೂಡ ಜಮಾ ಆಗದಿದ್ದರೆ ಪಿಎಂ ಕಿಸಾನ್‌ಗೆ ಎಚ್ಚರಿಕೆ ನೀಡಿ ದೂರು ನೀಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಪಿಎಂ ಕಿಸಾನ್ ಸಮ್ಮಾನ್ ಸಹಾಯವಾಣಿ ಸಂಖ್ಯೆ 011-24300606ಗೆ ಕರೆ ಮಾಡಿ ದೂರು ನೀಡಲು ಅವಕಾಶ ನೀಡಲಾಗಿದೆ.
- Advertisement -


