- Advertisement -
![]()
- Advertisement -
ನವದೆಹಲಿ: ವಾಣಿಜ್ಯ ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಇಳಿಕೆಯಾಗಿದ್ದು, ತೈಲ ಮಾರಾಟ ಕಂಪನಿಗಳು ಸಿಲಿಂಡರ್ ಬೆಲೆಯನ್ನು 33.50 ರೂಪಾಯಿಯಷ್ಟು ಕಡಿಮೆ ಮಾಡಿದ್ದು, ಪರಿಷ್ಕೃತ ದರ ಶುಕ್ರವಾರದಿಂದಲೇ ಜಾರಿಗೆ ಬಂದಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್) ಎಲ್‍ಪಿಜಿ ಬೆಲೆಯಲ್ಲಿ ಸತತ ನಾಲ್ಕನೇ ಕಡಿತ ಇದಾಗಿದೆ.
ಇನ್ನು ಭಾರತದಲ್ಲಿ ಒಟ್ಟು ಎಲ್‍ಪಿಜಿ ಬಳಕೆಯ ಸುಮಾರು ಶೇ. 90 ರಷ್ಟು ದೇಶೀಯ ಅಡುಗೆಮನೆಗಳಲ್ಲಿ ಬಳಸಲ್ಪಡುತ್ತಿದ್ದರೆ, ಉಳಿದ ಶೇ. 10 ರಷ್ಟು ವಾಣಿಜ್ಯ, ಕೈಗಾರಿಕಾ ಮತ್ತು ವಾಹನ ವಲಯಗಳಲ್ಲಿ ಬಳಸಲಾಗುತ್ತದೆ. . ದೇಶೀಯ ಸಿಲಿಂಡರ್ ಬೆಲೆಗಳು ಸಾಮಾನ್ಯವಾಗಿ ಸ್ಥಿರವಾಗಿರುತ್ತವೆ, ಆದರೆ ವಾಣಿಜ್ಯ ಸಿಲಿಂಡರ್ ಬೆಲೆಗಳು ಏರಿಳಿತಗೊಳ್ಳುತ್ತವೆ. ಕಳೆದ ಕೆಲವು ತಿಂಗಳುಗಳಿಂದ ಎಲ್‍ಪಿಜಿ ಸಿಲಿಂಡರ್ ಬೆಲೆ ಗಗನಕ್ಕೇರಿತ್ತು. ಇದರಿಂದ ಸಣ್ಣ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದರು. ಈಗ ಬೆಲೆ ಇಳಿಕೆಯಾಗಿರುವುದರಿಂದ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ.
- Advertisement -


