Friday, June 5, 2026
Homeತಾಜಾ ಸುದ್ದಿಕಾರ್ಮಿಕರಿಗೆ 9 ರಿಂದ10ಗಂಟೆ ಕೆಲಸ; ಕೇಂದ್ರದ ಪ್ರಸ್ತಾವನೆಗೆ ಒಪ್ಪಿಗೆ ನೀಡಲ್ಲ ಎಂದ ಕಾರ್ಮಿಕ ಸಚಿವ ಸಂತೋಷ್...

ಕಾರ್ಮಿಕರಿಗೆ 9 ರಿಂದ10ಗಂಟೆ ಕೆಲಸ; ಕೇಂದ್ರದ ಪ್ರಸ್ತಾವನೆಗೆ ಒಪ್ಪಿಗೆ ನೀಡಲ್ಲ ಎಂದ ಕಾರ್ಮಿಕ ಸಚಿವ ಸಂತೋಷ್ ಲಾಡ್

- Advertisement -
- Advertisement -

ಬೆಂಗಳೂರು: ಕೇಂದ್ರ ಸರ್ಕಾರ ಕಾರ್ಮಿಕರು 9 ರಿಂದ 10 ಗಂಟೆಗಳ ಕಾಲ ಕೆಲಸ ಮಾಡಬೇಕೆಂದ್ದು, ಪ್ರಸ್ತಾವನೆಯನ್ನ ಹೊರಡಿಸಿದ್ದು, ಆ ಪ್ರಸ್ತಾವನೆಗೆ ನಮ್ಮ ಒಪ್ಪಿಗೆಯಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾರ್ಮಿಕರು ಒಪ್ಪಿದರೆ ಮಾತ್ರ ಅವಕಾಶ ಕೊಡುತ್ತೇವೆ. ಅವರು ಒಪ್ಪದಿದ್ದರೆ ಅವಕಾಶ ಕೊಡುವುದಿಲ್ಲ. ಕಾರ್ಮಿಕರ ಅಭಿಪ್ರಾಯ ವನ್ನು ಪಡೆಯುತ್ತೇವೆ ಎಂದರು.

ಕೇಂದ್ರ ಸರ್ಕಾರದ ಪ್ರಸ್ತಾವನೆ ಕುರಿತಂತೆ ಟ್ರೇಡ್ ಯೂನಿ ಯನ್‌ಹಾಗೂ ಕೈಗಾರಿಕೆಗಳ ಜೊತೆ ಸಭೆ ನಡೆಸಲಾಗಿದೆ. 48 ಕೆಲಸ ಮಾಡಬೇಕು ಎಂದರು.

ವಾರಕ್ಕೆ ಎರಡು ದಿನ ರಜಾ ಇರಲಿದೆ ಎಂಬ ವಿಚಾರದ ಬಗ್ಗೆ ಕಾರ್ಮಿಕರು ಒಪ್ಪಿದರೆ ಮಾತ್ರ ಜಾರಿ ಮಾಡಬಹುದು. ಮಾರ್ಗಸೂಚಿ ಪ್ರಕಾರ ನಾವು ಅವಕಾಶವನ್ನು ಕಲ್ಪಿಸುತ್ತೇವೆ. ಟಿಸಿಎಸ್ ನಿಂದ 12 ಸಾವಿರ ಉದ್ಯೋಗವನ್ನು ಕಡಿತ ಮಾಡುವ ಬಗ್ಗೆ ಆ ಕಂಪೆನಿಯ ಜೊತೆ ಮಾತನಾಡುತ್ತೇವೆ ಎಂದರು.

- Advertisement -

Latest News

error: Content is protected !!