Wednesday, June 3, 2026
Homeತಾಜಾ ಸುದ್ದಿಆಗಸ್ಟ್ 2 ರಂದು ರೈತರ ಖಾತೆಗಳಿಗೆ ಪಿಎಂ ಕಿಸಾನ್ ಸಮ್ಮಾನ್ 20ನೇ ಕಂತಿನ ಹಣ ಬಿಡುಗಡೆ

ಆಗಸ್ಟ್ 2 ರಂದು ರೈತರ ಖಾತೆಗಳಿಗೆ ಪಿಎಂ ಕಿಸಾನ್ ಸಮ್ಮಾನ್ 20ನೇ ಕಂತಿನ ಹಣ ಬಿಡುಗಡೆ

- Advertisement -
- Advertisement -

ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತು ಆಗಸ್ಟ್ 2ರಂದು ರೈತರ ಖಾತೆಗಳಿಗೆ ಬಿಡುಗಡೆಯಾಗಲಿದೆ.

ವಾರಣಾಸಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರೈತರ ಖಾತೆಗಳಿಗೆ ಶನಿವಾರ 20ನೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ.

20ನೇ ಕಂತಿನಲ್ಲಿ ದೇಶದ 9.7 ಕೋಟಿ ರೈತರಿಗೆ 20,500 ಕೋಟಿ ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.

2019ರಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಈವರೆಗೆ ಒಟ್ಟು 3.69 ಲಕ್ಷ ಕೋಟಿ ರೂಪಾಯಿಗಳನ್ನು 19 ಕಂತುಗಳ ಮೂಲಕ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ

- Advertisement -

Latest News

error: Content is protected !!