Monday, June 8, 2026
Homeಅಪರಾಧಭಯೋತ್ಪಾದಕ ಆಲ್‌ಖೈದಾ ಉಗ್ರಗಾಮಿ ಸಂಘಟನೆ ಜೊತೆ ಸಂಪರ್ಕ; ಬೆಂಗಳೂರಿನ ಶಂಕಿತ  ಮಹಿಳೆಯ ಬಂಧನ 

ಭಯೋತ್ಪಾದಕ ಆಲ್‌ಖೈದಾ ಉಗ್ರಗಾಮಿ ಸಂಘಟನೆ ಜೊತೆ ಸಂಪರ್ಕ; ಬೆಂಗಳೂರಿನ ಶಂಕಿತ  ಮಹಿಳೆಯ ಬಂಧನ 

- Advertisement -
- Advertisement -

ಬೆಂಗಳೂರು: ಗುಜರಾತ್‍ನ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಅಧಿಕಾರಿಗಳ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕುಖ್ಯಾತ ಭಯೋತ್ಪಾದಕ  ಆಲ್ ಖೈದಾ ಉಗ್ರಗಾಮಿ ಸಂಘಟನೆ ಜೊತೆ ಸಂಪರ್ಕ ಹೊಂದಿದ ಆರೋಪದ ಮೇಲೆ ಬೆಂಗಳೂರಿನ ಹೆಬ್ಬಾಳದ ಶಂಕಿತ  ಮಹಿಳೆಯನ್ನು ಬಂಧಿಸಿದೆ. 

ಬಂಧಿತ ಆರೋಪಿ ಜಾರ್ಖಂಡ್ ಮೂಲದ ಶಮಾ ಪರ್ವೀನ್ ಎನ್ನಲಾಗಿದೆ.

ಬೆಂಗಳೂರಿನ ಹೆಬ್ಬಾಳದಲ್ಲಿ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದ  ಶಮಾ ಪರ್ವೀನ್ ಅವರು ತನ್ನ ಸಹೋದರನೊಂದಿಗೆ ವಾಸವಾಗಿದ್ದಳು. ಈಕೆ ಭಯೋತ್ಪಾದನೆಯ ಬಗ್ಗೆ ಸಹಾನುಭೂತಿ ಹಾಗೂ ಆಲ್ ಖೈದಾ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದಳು. ಆನ್‍ಲೈನ್ ಮೂಲಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಆಕೆಯಿಂದ ವಿವರವಾದ ಪುರಾವೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ. ಈಗ ಹೆಚ್ಚಿನ ಮಾಹಿತಿಯನ್ನು ಪಡೆಯಲು ಆಂತರಿಕ ವಿಚಾರಣೆಯನ್ನು ಪ್ರಾರಂಭಿಸುತ್ತಿದೆ ಎಂದು ಎಟಿಎಸ್ ತಿಳಿಸಿದೆ. ಅಷ್ಟೇಅಲ್ಲದೆ ಈಕೆ ಇಲ್ಲಿಂದಲೇ ಭಯೋತ್ಪಾದಕರನ್ನು ನೇಮಕ ಮಾಡಿಕೊಳ್ಳುತ್ತಿದ್ದರು ಎಂಬ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಲಾಗಿದೆ. 

ಬಂಧಿತ ಮಹಿಳೆಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಗುಜರಾತ್‍ಗೆ ಕರೆದೊಯ್ಯಲಾಗಿದೆ.  ಗುಜರಾತ್ ಪೊಲೀಸರಿಗೆ ಟ್ರಾನ್ಸಿಟ್ ವಾರಂಟಿಯನ್ನು ನೀಡಿದೆ. ಮೂಲಗಳ ಪ್ರಕಾರ ಪರ್ವೀನ್ ಭಯೋತ್ಪಾದಕ ಸಂಘಟನೆಗಳ ಪ್ರಮುಖರ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಕರ್ನಾಟಕದಿಂದ ಕಾರ್ಯಾಚರಣೆಗಳನ್ನು ಸಂಘಟಿಸುವ ಪ್ರಮುಖ ನಿರ್ವಾಹಕಳಾಗಿದ್ದಳು. ಕಳೆದ ವಾರ ಎಟಿಎಸ್ ಬಂಧಿಸಿದ ನಾಲ್ವರು ಅಲ್-ಖೈದಾ ಭಯೋತ್ಪಾದಕರಿಂದ ಪಡೆದ ಸುಳಿವುಗಳ ಆಧಾರದ ಮೇಲೆ ಈ ಬಂಧನ ಮಾಡಲಾಗಿದೆ. 

ಎಟಿಎಸ್, ಬೆಂಗಳೂರು ಪೊಲೀಸರ ಸ್ಥಳೀಯ ಬೆಂಬಲದೊಂದಿಗೆ ಶಮಾ ಇರುವ ಸ್ಥಳವನ್ನು ಪತ್ತೆಹಚ್ಚಿ ಆಕೆಯನ್ನು ವಶಕ್ಕೆ ಪಡೆದಿದೆ.  

- Advertisement -

Latest News

error: Content is protected !!