Thursday, June 4, 2026
Homeತಾಜಾ ಸುದ್ದಿರಷ್ಯಾ ಮತ್ತು ಜಪಾನ್ ನಲ್ಲಿ ಸುನಾಮಿ ಆತಂಕ

ರಷ್ಯಾ ಮತ್ತು ಜಪಾನ್ ನಲ್ಲಿ ಸುನಾಮಿ ಆತಂಕ

- Advertisement -
- Advertisement -

ನವದೆಹಲಿ: ರಷ್ಯಾ ಮತ್ತು ಜಪಾನ್ ನಲ್ಲಿ ಸುನಾಮಿ ಆತಂಕ ಎದುರಾಗಿದ್ದು, ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಇಂದು ಮುಂಜಾನೆ ರಿಕ್ಟರ್ ಮಾಪಕದಲ್ಲಿ 8.8 ತೀವ್ರತೆಯ ಭೂಕಂಪ ಸಮುದ್ರದೊಳಗೆ ಸಂಭವಿಸಿದೆ.

ರಷ್ಯಾ ಮತ್ತು ಜಪಾನ್‌ನಲ್ಲಿ 4 ಮೀಟರ್ ನಷ್ಟು ಎತ್ತರದ ಸುನಾಮಿ ಅಲೆಗಳು ಆತಂಕ ಹುಟ್ಟಿಸಿದ್ದು, ಅಮೆರಿಕ, ಹವಾಯಿ ದ್ವೀಪ ಸೇರಿದಂತೆ ಪೆಸಿಫಿಕ್ ಮಹಾಸಾಗರದಾದ್ಯಂತ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಇದೇ ವೇಳೆ ಸುನಾಮಿ ಭೀತಿ ಹಿನ್ನೆಲೆಯಲ್ಲಿ ಜಪಾನ್‌ನ ಪೂರ್ವ ಕರಾವಳಿಯಾದ್ಯಂತ ಜನರನ್ನು ಸ್ಥಳಾಂತರ ಮಾಡಲಾಗಿದೆ.

- Advertisement -

Latest News

error: Content is protected !!