Wednesday, June 3, 2026
Homeತಾಜಾ ಸುದ್ದಿಕರ್ನಾಟಕ ಅಧಿನಿಯಮ 2025; ಆಸ್ತಿ ವರ್ಗಾವಣೆಗೆ GPA ನೋಂದಣಿ ಮಾಡಬೇಕು; ನೋಂದಣಿ ಸಂದರ್ಭ ವ್ಯಕ್ತಿ ಬದುಕಿರುವ...

ಕರ್ನಾಟಕ ಅಧಿನಿಯಮ 2025; ಆಸ್ತಿ ವರ್ಗಾವಣೆಗೆ GPA ನೋಂದಣಿ ಮಾಡಬೇಕು; ನೋಂದಣಿ ಸಂದರ್ಭ ವ್ಯಕ್ತಿ ಬದುಕಿರುವ ಪುರಾವೆ ನೀಡಬೇಕು

- Advertisement -
- Advertisement -

ಕರ್ನಾಟಕ ಅಧಿನಿಯಮ 2025; ಆಸ್ತಿ ವರ್ಗಾವಣೆಗೆ GPA ನೋಂದಣಿ ಮಾಡಬೇಕು; ನೋಂದಣಿ ಸಂದರ್ಭ ವ್ಯಕ್ತಿ ಬದುಕಿರುವ ಪುರಾವೆ ಹಾಜರುಪಡಿಸಬೇಕು

ಜನರಲ್ ಪವರ್ ಆಟಾರ್ನಿ ಆಸ್ತಿ ನೋಂದಣಿಗೆ ಕಡ್ಡಾಯಗೊಳಿಸುವ ಹಿನ್ನೆಲೆಯಲ್ಲಿ ನೋಂದಣಿ ಕರ್ನಾಟಕ ಅಧಿನಿಯಮ 2025 ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಸೋಮವಾರದಂದು  ರಾಜ್ಯ ಸರ್ಕಾರ ಈ ಸಂಬಂಧ ಅಧಿಕೃತ ರಾಜ್ಯ ಪತ್ರ ಹೊರಡಿಸಿದೆ.  ಈ ಮಸೂದೆ ರಾಜ್ಯ ಪತ್ರ ಹೊರಡಿಸಿದ ದಿನದಿಂದಲೇ ಜಾರಿಗೆ ಬರಲಿದ್ದು, ಈ ಮಸೂದೆಯು ನೋಂದಣಿ ಅಧಿನಿಯಮ 19008(1908ರ ಕೇಂದ್ರ ಅಧಿನಿಯಮ 16) ಅನ್ನು ಮತ್ತಷ್ಟು ತಿದ್ದುಪಡಿ ಮಾಡಿ ಕೆಲವು ಬದಲಾವಣೆ ಒಳಗೊಳ್ಳುವುದಾಗಿದೆ. ಮುಖ್ಯವಾಗಿ ಅಧಿನಿಯಮ ತಿದ್ದುಪಡಿಯು ಆಸ್ತಿ ನೋಂದಣಿಯನ್ನು ಸಂಪೂರ್ಣ ಡಿಜಿಟಲೀಕರಿಸುವ, ಪಾರದರ್ಶಕತೆ ಹೆಚ್ಚಿಸುವ ಬಗೆಯಾಗಿದೆ.

ಆಸ್ತಿ ವರ್ಗಾವಣೆಗೆ ಮೊದಲು ನಡೆಸುವ GPA ಕೂಡ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಅಷ್ಟೇಅಲ್ಲದೆ ಆಸ್ತಿ ವರ್ಗಾವಣೆ ಸಮಯದಲ್ಲಿ ಪವರ್ ಆಫ್ ಅಟಾರ್ನಿ ಬರೆದು ಕೊಡುವವರು ಬದುಕಿರುವುದನ್ನು ಖಚಿತಪಡಿಸಲು ಸೂಕ್ತ ಪುರಾವೆ ಒದಗಿಸಬೇಕು. 

ಈ ಅಧಿನಿಯಮ ಯೋಜನೆಯು ಅಕ್ರಮ ಆಸ್ತಿ ವರ್ಗಾವಣೆ, ನೋಂದಣಿ, ಭೂಕಬಳಿಗೆ ಮತ್ತು ಒತ್ತುವರಿ ಪ್ರಕರಣಗಳನ್ನು ತಪ್ಪಿಸಲಿದೆ.

- Advertisement -

Latest News

error: Content is protected !!