Tuesday, June 9, 2026
Homeಕರಾವಳಿಬೆಳ್ತಂಗಡಿ : ನವ ವಿವಾಹಿತೆ ವಿಷ ಸೇವಿಸಿ ಆತ್ಮಹ*ತ್ಯೆ

ಬೆಳ್ತಂಗಡಿ : ನವ ವಿವಾಹಿತೆ ವಿಷ ಸೇವಿಸಿ ಆತ್ಮಹ*ತ್ಯೆ

- Advertisement -
- Advertisement -

ಬೆಳ್ತಂಗಡಿ : ನವ ವಿವಾಹಿತೆಯೊಬ್ಬರು ವಿಷ ಸೇವಿಸಿ ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಮರೋಡಿ ಗ್ರಾಮದ ಮೂಕಾಂಬಿಕಾ ನಿಲಯ ಪಚ್ಚಡಿ ಎಂಬಲ್ಲಿ ಜುಲೈ 28 ರಂದು ನಡೆದಿದೆ. ಪಚ್ಚಡಿ ಮನೆಯ ವಾಣಿಶ್ರೀ(26) ಆತ್ಮಹತ್ಯೆ ಮಾಡಿಕೊಂಡವರು.

ವಾಣಿಶ್ರೀ ಒಂದು ವರ್ಷ ಮೂರು ತಿಂಗಳ ಹಿಂದೆ ಪ್ರಶಾಂತ್ ಎಂಬವರನ್ನು ವಿವಾಹವಾಗಿದ್ದರು.ನಿನ್ನೆ ವಾಣಿಶ್ರೀ ಹೊಟ್ಟೆನೋವು ಎಂದು ಹೇಳಿದಾಗ ಪಕ್ಕದ ಮನೆಗೆ ತೆರಳಿದ್ದ ದೊಡ್ಡಮ್ಮರವರಿಗೆ ಅನುಮಾನ ಬಂದು ವಾಣಿಶ್ರೀ ಗಂಡ ಯಾವುದೋ ಕಾರ್ಯಕ್ರಮಕ್ಕೆ ತೆರಳಿದ್ದ ಕಾರಣ ಆಕೆಯ ತಂದೆಗೆ ಕರೆ ಮಾಡಿದ್ದಾರೆ.ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

 ಮೃತರು ಪತಿ ಪ್ರಶಾಂತ್, ತಂದೆ ರಾಜು, ತಾಯಿ ಪ್ರೇಮ ಅವರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!