ಹಾಸ್ಯಮಯ ಚಿತ್ರಗಳಲ್ಲಿ ಒಂದಾಗಿರುವ ʻಸು ಫ್ರಮ್ ಸೋ’ ಸಿನಿಮಾವು ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಭರ್ಜರಿ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದೆ. ಸಿನಿಮಾವು ಬಿಡುಗಡೆ ಆದ ಮೂರನೇ ದಿನವೇ ಅಡ್ವಾನ್ಸ್ ಬುಕ್ಕಿಂಗ್ ಮೂಲಕವೇ 2.4 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಕೆ ಮಾಡಿದೆ ಎಂಬ ಸುದ್ದಿ ಹೊರಬಿದ್ದಿದೆ. ಸಿನಿಮಾ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಕಲೆಕ್ಷನ್ 8 ಕೋಟಿ ರೂ. ದಾಟುವ ನಿರೀಕ್ಷೆಯಿದೆ.
ಈ ಸಿನಿಮಾವನ್ನು ಜೆ.ಪಿ. ತುಮಿನಾಡ್ ಬರೆದು ನಿರ್ದೇಶಿಸಿದ್ದಾರೆ. ರಾಜ್ ಬಿ ಶೆಟ್ಟಿ ಅವರು ಚಿತ್ರವನ್ನು ನಿರ್ಮಿಸಿದ್ದು ಮಾತ್ರವಲ್ಲದೇ ನಾಯಕನಾಗಿಯೂ ಅಭಿನಯಿಸಿದ್ದರೆ. ಶನೀಲ್ ಗೌತಮ್ ಮತ್ತು ಸಂಧ್ಯಾ ಅರೆಕೆರೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಾಸ್ಯಮಯ ಚಿತ್ರವು ಕರ್ನಾಟಕದ ಕರಾವಳಿ ಪ್ರದೇಶವಾದ ಸೋಮೇಶ್ವರದ ಮಾಡ್ಯಾರ್ ಹಳ್ಳಿಯಲ್ಲಿ ನಡೆಯುವ ಕಥೆಯನ್ನು ಪ್ರಸ್ತುತಪಡಿಸುತ್ತದೆ. ಈ ಸಿನಿಮಾ ಬಗೆಗಿನ ಸಕರಾತ್ಮಕ ವಿಮರ್ಶೆಗೆ ರಾಜ್ಯದಾದ್ಯಂತ ಈ ಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರು ಥಿಯೇಟರ್‌ಗಳತ್ತ ಮುಗಿಬಿದ್ದ ದೃಶ್ಯ ಕಂಡುಬಂದಿದ್ದಾರೆ.
ಸಿನಿಮಾ ಪ್ರೀಯರಿಂದ ಭಾರೀ ಸದ್ದು ಮಾಡುತ್ತಿರುವ ಈ ಸಿನಿಮಾವನ್ನ ‘ಪುಷ್ಪ’ ಮತ್ತು ‘ಕೆಜಿಎಫ್’ ಸಿನಿಮಾಗಳನ್ನು ವಿತರಣೆ ಮಾಡಿದ್ದ ಅನಿಲ್ ಟಂಡಾನಿ ಅವರ ಎಎ ಫಿಲಂಸ್ ಸಂಸ್ಥೆ, ಈ ಚಿತ್ರದ ಹಿಂದಿ ಆವೃತ್ತಿಯನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ. ಅಷ್ಟೇಅಲ್ಲದೆ ಆಗಸ್ಟ್ 1ರಂದು ಕೇರಳದಲ್ಲಿ ಈ ಸಿನಿಮಾದ ಮಲಯಾಳಂ ಆವೃತ್ತಿಯು ಬಿಡುಗಡೆಯಾಗಲಿದ್ದು, ಅದನ್ನು ಸ್ಟಾರ್ ನಟ ದುಲ್ಖರ್ ಸಲ್ಮಾನ್ ಮಾಲೀಕತ್ವದ ವೇಫರರ್ ಫಿಲಂಸ್ ವಿತರಿಸಲಿದೆ.


