Saturday, August 29, 2026
Homeಕರಾವಳಿಮಂಗಳೂರುಬೆಳ್ತಂಗಡಿ : ನಕ್ಸಲ್ ನಾಯಕ ರೂಪೇಶ್ ಪೊಲೀಸ್ ಕಸ್ಟಡಿ ಅಂತ್ಯ; ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿ...

ಬೆಳ್ತಂಗಡಿ : ನಕ್ಸಲ್ ನಾಯಕ ರೂಪೇಶ್ ಪೊಲೀಸ್ ಕಸ್ಟಡಿ ಅಂತ್ಯ; ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿ ಮತ್ತೆ ಕೇರಳ ಜೈಲಿಗೆ

- Advertisement -
- Advertisement -

ಬೆಳ್ತಂಗಡಿ : ದಕ್ಷಿಣ ಭಾರತದ  ನಕ್ಸಲ್ ಚಳುವಳಿಯ ಪ್ರಮುಖ ನಾಯಕ ರೂಪೇಶ್.ಪಿ.ಆರ್ (57) ಕೇರಳ ಜೈಲಿನಿಂದ ಜುಲೈ 22 ರಂದು ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮೂರು ದಿನ ಬೆಳ್ತಂಗಡಿ ಪೊಲೀಸ್ ಕಸ್ಟಡಿಗೆ ಪಡೆದು 10-12-2012 ರ ಗುಂಡಿನ ದಾಳಿ ಪ್ರಕರಣ ನಡೆದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಬೊಳ್ಳೆ ಪ್ರದೇಶದಲ್ಲಿ ಮಹಜರು ನಡೆಸಿ ತನಿಖೆ ನಡೆಸಿದ್ದರು.

ಜುಲೈ 24 ರಂದು ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನಲೆಯಲ್ಲಿ ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಬಿಗಿ ಭದ್ರತೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಕೇರಳ ಜೈಲಿಗೆ ಪ್ರಯಾಣ ಬೆಳೆಸಲಿದ್ದಾರೆ.

- Advertisement -

Latest News

error: Content is protected !!