- Advertisement -
![]()
- Advertisement -
ಉಪ್ಪಿನಂಗಡಿ: ಇಲ್ಲಿನ ಸುತ್ತಲಿನ ಮೂವತ್ತಮೂರು ಗ್ರಾಮಗಳ ಬಾಣಂತಿಯರಿಗೆ ವಿಜಯ ವೈದ್ಯ ಶಾಲೆಯ ಮೂಲಕ ದಶಮೂಲಾರಿಷ್ಠ ನೀಡುತ್ತಿದ್ದ ವೈದ್ಯ ಶೀನಪ್ಪ ಶೆಟ್ಟರು ಇಂದು ನಿಧನರಾಗಿದ್ದಾರೆ.
ಶೀನ ಶೆಟ್ಟರು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಅಲೆದಾಡಿ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಔಷಧಿಗಳನ್ನು ತಯಾರಿಸಿ ನಾಲ್ಕು ತಲೆಮಾರಿನ ಮಂದಿಗೆ ಆಯುರ್ವೇದ ಔಷಧಿ ಕೊಟ್ಟು ಉಪಚರಿಸಿದವರು. ಅಷ್ಟೇಅಲ್ಲದೆ ಉಪ್ಪಿನಂಗಡಿಗೆ ಅರುವತ್ತರ ದಶಕದಲ್ಲಿ ಮೊದಲಾಗಿ ರಿಕ್ಷಾ ಸರ್ವೀಸ್ ಕೊಡಿಸಿ,, ಚಾಲಕರನ್ನು ನೇಮಿಸಿ ಊರ ಮಂದಿಯ ಪ್ರಯಾಣ ಸುಗಮಗೊಳಿಸಿದರು. ಯಕ್ಷಗಾನ ತಾಳಮದ್ದಲೆ ಅವರ ಹವ್ಯಾಸವಾಗಿದ್ದು, ಉಪ್ಪಿನಂಗಡಿಯಲ್ಲಿ ಇಂದಿಗೂ ಸಕ್ರಿಯವಾಗಿರುವ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘ, ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯನ್ನು ಅವರೇ ಸ್ಥಾಪಿಸಿದ್ದರು. ಅವರೇ ಕಟ್ಟಿದ್ದು.
ಇದೀಗ 96ನೇ ವರ್ಷ ವಯಸ್ಸಿನಲ್ಲಿ ಅವರು ಇಹಲೋಕವನ್ನು ತ್ಯಜಿಸಿದ್ದಾರೆ.
- Advertisement -


