Friday, June 5, 2026
Homeಅಪರಾಧಕೊಲೆ ಯತ್ನ ಹಾಗೂ ಜಾತಿ ನಿಂದನೆ ಆರೋಪ; ನಾಲ್ವರು ರೌಡಿಶೀಟರ್‌ಗಳ ಬಂಧನ

ಕೊಲೆ ಯತ್ನ ಹಾಗೂ ಜಾತಿ ನಿಂದನೆ ಆರೋಪ; ನಾಲ್ವರು ರೌಡಿಶೀಟರ್‌ಗಳ ಬಂಧನ

- Advertisement -
- Advertisement -

ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ತೂರು ಗ್ರಾಮದ ಸಂತೆಕಟ್ಟೆಯಲ್ಲಿರುವ ಹೋಟೆಲ್‌ನಲ್ಲಿ ಜುಲೈ 20ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ರೌಡಿಶೀಟರ್‌ಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬಂಧಿತರನ್ನು ಶ್ರೀಕಾಂತ್ ಕುಲಾಲ್, ಸದಾನಂದ ಪೂಜಾರಿ, ಸಂತೋಷ್ ನಾಯಕ್ ಮತ್ತು ರಾಜ ಅಲಿಯಾಸ್ ರಾಜೇಶ್ ನಾಯಕ್ ಎಂದು ಗುರುತಿಸಲಾಗಿದೆ. ಮೂವರು ಆರೋಪಿಗಳು ಹಳೆಯ ರೌಡಿಶೀಟರ್ ರಾಜ ಅಲಿಯಾಸ್ ರಾಜೇಶ್ ನಾಯಕ್ ಅವರಿಗೆ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಸಂತೋಷ್ ನಾಯಕ್ ಅವರು ರಾಜೇಶ್ ನಾಯಕ್ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ದಲಿತ ದೌರ್ಜನ್ಯ ಪ್ರಕರಣ ಸಂಬಂಧ ರಾಜ ಅಲಿಯಾಸ್ ರಾಜೇಶ್ ನಾಯಕ್ ಅವರನ್ನು ಬಂಧಿಸಲಾಗಿದೆ.

ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಾಂತ್ ಕುಲಾಲ್, ಸಂತೋಷ್ ನಾಯಕ್ ಮತ್ತು ಸದಾನಂದ ಪೂಜಾರಿ ಅವರನ್ನು ವಶಕ್ಕೆ ಪಡೆಯಲಾಗಿದೆ.

- Advertisement -

Latest News

error: Content is protected !!