Wednesday, June 3, 2026
Homeಕರಾವಳಿಹಿಮಾಚಲ ಪ್ರದೇಶದಲ್ಲಿ ಭೂಕುಸಿತ; ಬಂಟ್ವಾಳದ 47 ಮಂದಿ ಪ್ರಯಾಣಿಕರು ಸುರಕ್ಷಿತ

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ; ಬಂಟ್ವಾಳದ 47 ಮಂದಿ ಪ್ರಯಾಣಿಕರು ಸುರಕ್ಷಿತ

- Advertisement -
- Advertisement -

ಬಂಟ್ವಾಳ: ಹಿಮಾಚಲ ಪ್ರದೇಶದ ಶಿಮ್ಲಾ ಮನಾಲಿ ಹೆದ್ದಾರಿಯಲ್ಲಿ ದೊಡ್ಡ ಮಟ್ಟದ ಭೂ ಕುಸಿತ ಉಂಟಾಗಿದ್ದು, ಇಲ್ಲಿನ ತೀರ್ಥಕ್ಷೇತ್ರಗಳಿಗೆ ಬಂಟ್ವಾಳದಿಂದಲೂ ಪ್ರಯಾಣಿಕರು ತೆರಳಿದ್ದು, ಎಲ್ಲರು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಬಂಟ್ವಾಳದಿಂದ  ಸುಮಾರು 47 ಮಂದಿ ಪ್ರಯಾಣಿಕರು ತೀರ್ಥಕ್ಷೇತ್ರಗಳ ಭೇಟಿಗೆ ತೆರಳಿದ್ದು, ಈ ನಡುವೆ ಸಂಭವಿಸಿದ ಭೂ ಕುಸಿತದಲ್ಲಿ ಬಂಟ್ವಾಳದ ಪ್ರಯಾಣಿಕರಿದ್ದ ಮೂರು ವಾಹನಗಳು ಕುಸಿತದ ಸ್ಥಳಕ್ಕಿಂತ ಬಹಳ ದೂರದಲ್ಲಿತ್ತು. ಈಗಾಗಿ ಯಾವುದೇ ಅಪಾಯವಿಲ್ಲದೆ ಎಲ್ಲರು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಭೂ ಕುಸಿತದಲ್ಲಿ ಒಂದಷ್ಟು ವಾಹನಗಳು ಮಣ್ಣಿನಡಿಗೆ ಸಿಲುಕಿದೆ ಎನ್ನಲಾಗಿದೆ. ಸುಮಾರು 3 ಕಿ.ಮೀ.ವರೆಗೆ ವಾಹನಗಳ ಸಾಲು ನಿಂತಿದ್ದು, ಮಣ್ಣು ತೆರವು ಕಾರ್ಯ ಭರದಿಂದ ಸಾಗುತ್ತಿದೆ ಎಂದು ಪ್ರವಾಸಿಗರು ತಿಳಿಸಿದ ವರದಿಂದ ಗೊತ್ತಾಗಿದೆ.

- Advertisement -

Latest News

error: Content is protected !!