- Advertisement -
![]()
- Advertisement -
ಸುಳ್ಯ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯ ಕಾಂಪೌಂಡ್ ಗುದ್ದಿದ ಘಟನೆ ಗೂನಡ್ಕ ಬಳಿ ಜುಲೈ 16 ಬುಧವಾರದಂದು ಸಂಭವಿಸಿದೆ.
ಕಾರಿನವನರು ಮೂಲತಃ ಕೇರಳದ ಕಾಸರಗೋಡಿನವರು ಎಂದು ತಿಳಿದುಬಂದಿದೆ.
ಬೆಂಗಳೂರಿನಿಂದ ಸಂಪಾಜೆ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ KL 7 CR 2340 ಕೇರಳದ ಮೂಲದ ವಾಹನ ಗೂನಡ್ಕ ದ ಶಿರಾಡಿ ಬೈಲೆ ದೈವಸ್ಥಾನಕ್ಕೆ ಹೋಗುವ ದ್ವಾರದ ಬಳಿಯ ತಿರುವಿನಲ್ಲಿ ತಲುಪಿದಾಗ ಒಮ್ಮಿಂದೊಮ್ಮೆಲೆ ಚಾಲಕನ ನಿಯಂತ್ರಣ ತಪ್ಪಿ ರಹೀಂ ಬೀಜದ ಕಟ್ಟೆ ಅವರ ಮನೆಯ ಕಾಪೌಂಟ್ ಗೆ ಗುದ್ದಿ ನಿಂತಿತು. ಘಟನೆಯಲ್ಲಿ ಕಾಂಪೌಂಡ್ ಗೆ ಹಾನಿಯಾಗಿದ್ದು ಕಾರಿನ ಮುಂಭಾಗ ಜಖಂಗೊಂಡಿದೆ.
- Advertisement -


