Sunday, May 19, 2024
Homeತಾಜಾ ಸುದ್ದಿಚಿತ್ರರಂಗಕ್ಕೆ ರಿ-ಎಂಟ್ರಿ ಕೊಡಲಿದ್ದಾರಾ ನಟಿ ರಮ್ಯಾ..?

ಚಿತ್ರರಂಗಕ್ಕೆ ರಿ-ಎಂಟ್ರಿ ಕೊಡಲಿದ್ದಾರಾ ನಟಿ ರಮ್ಯಾ..?

spot_img
- Advertisement -
- Advertisement -

ಬೆಂಗಳೂರು: ನಟಿ ರಮ್ಯಾ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ದರ್ಶನ ನೀಡುತ್ತಲೇ ಇದ್ದಾರೆ. ಇತ್ತೀಚೆಗಷ್ಟೆ ಆಧ್ಯಾತ್ಮಿಕವಾದಂತಹ ಒಂದಿಷ್ಟು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಎಲ್ಲರಲ್ಲೂ ಚರ್ಚೆ ಹುಟ್ಟು ಹಾಕಿದ್ದರು. ಆದರೆ ಇದೀಗ ಮತ್ತೊಂದು ಅವತಾರದ ಫೋಟೋದಲ್ಲಿ ಕಾಣಿಸಿದ್ದಾರೆ ಈ ನಟಿ.

ಹೌದು, ನಟಿ ರಮ್ಯಾ ಕೂದಲು ಕಟ್ ಮಾಡುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಫುಲ್ ಗ್ಲಾಮರಸ್ ಆಗಿ ಕಾಣುತ್ತಿರುವ ಈ ನಟಿ ಫೋಟೋ ಮೂಲಕ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಮತ್ತೆ ಸಿನಿಮಾಗೆ ರಮ್ಯಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಹಾಕುತ್ತಿದ್ದಾರೆ.

ಆದರೆ ಇದ್ಯಾವುದಕ್ಕೂ ರಮ್ಯಾ ಪ್ರತಿಕ್ರಿಯೆ ನೀಡಿಲ್ಲ. ಇಷ್ಟು ದಿನ ರಮ್ಯಾ ಎಲ್ಲಿದ್ದಾರೆ ಎಂಬುದೇ ಅನೇಕರಿಗೆ ತಿಳಿದಿದ್ದಿಲ್ಲ. ಆದರೆ ಇದೀಗ ಇದ್ದಕ್ಕಿದ್ದ ಹಾಗೆ ಒಂದರ ಮೇಲೊಂದರಂತೆ ವಿಭಿನ್ನ ಪೋಸ್ಟ್ ಹಾಕುವ ಮೂಲಕ ಎಲ್ಲರಿಗೂ ಕುತೂಹಲ ಮೂಡಿಸುತ್ತಿದ್ದಾರೆ ಈ ನಟಿ.

- Advertisement -
spot_img

Latest News

error: Content is protected !!