Sunday, July 6, 2025
Homeಕರಾವಳಿಉಡುಪಿಉಡುಪಿ: ಯುವತಿಯನ್ನು ದೈಹಿಕವಾಗಿ ಬಳಸಿಕೊಂಡು ಬೇರೆ ಮದುವೆಯಾಗಲು ಹೊರಟ ಯುವಕ ಅರೆಸ್ಟ್

ಉಡುಪಿ: ಯುವತಿಯನ್ನು ದೈಹಿಕವಾಗಿ ಬಳಸಿಕೊಂಡು ಬೇರೆ ಮದುವೆಯಾಗಲು ಹೊರಟ ಯುವಕ ಅರೆಸ್ಟ್

spot_img
- Advertisement -
- Advertisement -

ಉಡುಪಿ: ಯುವತಿಯನ್ನು ದೈಹಿಕವಾಗಿ ಬಳಸಿಕೊಂಡು ಬೇರೆ ಮದುವೆಯಾಗಲು ಹೊರಟ ಯುವಕನನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಕೊಳಲಗಿರಿ ಗ್ರಾಮದ ನರ್ನಾಡುಗುಡ್ಡೆ ಲಕ್ಷ್ಮೀನಗರದ ನಿವಾಸಿ ಆರೋಪಿ ಸಂಜಯ್ ಕರ್ಕೇರ (28) ಬಂಧಿತ.

ಆರೋಪಿ ಹಾಗೂ ಸಂತ್ರಸ್ತೆ ಪ್ರೀತಿಸುತ್ತಿದ್ದು, 2024 ಜುಲೈ11ರಂದು ಆರೋಪಿಯೊಂದಿಗೆ ಆಕೆ ಕಳಸಕ್ಕೆ ತೆರಳಿದ್ದು, ಚಾರಣ ಮುಗಿದ ಅನಂತರ ಆಕೆಗೆ ಜ್ಯೂಸ್ ನೀಡಿ ಅರೆಪ್ರಜ್ಞೆ ಮಾಡಿ ದೈಹಿಕ ಸಂಪರ್ಕ ನಡೆಸಿದ್ದ. ಅನಂತರ ಮದುವೆಯಾಗುವುದಾಗಿ ನಂಬಿಸಿ ಶೃಂಗೇರಿಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಸಿಂಧೂರವಿಟ್ಟು ಹೂವಿನ ಮಾಲೆ ಹಾಕಿದ್ದ. ಮುಂದೆ ಮನೆಯವರನ್ನು ಒಪ್ಪಿಸಿ ಮದುವೆಯಾಗುವ ಭರವಸೆ ನೀಡಿ ಹಲವಾರು ಬಾರಿ ಅತ್ಯಾಚಾ*ರ ಎಸಗಿದ್ದ ಎಂದು ಸಂತ್ರಸ್ತೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕೊಳಲಗಿರಿ ಗ್ರಾಮದ ನರ್ನಾಡುಗುಡ್ಡೆ ಲಕ್ಷ್ಮೀನಗರದ ನಿವಾಸಿ ಆರೋಪಿ ಸಂಜಯ್ ಕರ್ಕೇರ (28) ನನ್ನು ಮಹಿಳಾ ಠಾಣೆಯ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

- Advertisement -
spot_img

Latest News

error: Content is protected !!