Saturday, June 6, 2026
Homeಕರಾವಳಿಮಂಗಳೂರುಮಂಗಳೂರು : ಲೋನ್ ಆಪ್ ಕಿರುಕುಳ ತಾಳಲಾರದೇ ಆತ್ಮಹ*ತ್ಯೆಗೆ ಶರಣಾದ ಯುವಕ

ಮಂಗಳೂರು : ಲೋನ್ ಆಪ್ ಕಿರುಕುಳ ತಾಳಲಾರದೇ ಆತ್ಮಹ*ತ್ಯೆಗೆ ಶರಣಾದ ಯುವಕ

- Advertisement -
- Advertisement -

ಮಂಗಳೂರು : ಲೋನ್ ಆಪ್ ಕಿರುಕುಳ ತಾಳಲಾರದೇ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನ ಕೋಡಿಕಲ್‌ನಲ್ಲಿ ನಡೆದಿದೆ. ಕೋಡಿಕಲ್ ನಿವಾಸಿ ನಿಖಿಲ್ ಪೂಜಾರಿ (30) ಮೃತ ಯುವಕ. ಆ್ಯಪ್‌ಗಳಲ್ಲಿ ಸಾಲ ಪಡೆದು ತೀರಿಸಲಾಗದೇ ಆರ್ಥಿಕ ಹೊರೆಯಿಂದ ಬೇಸತ್ತು ನಿಖಿಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ನಿಖಿಲ್ ಎಂದಿನಂತೆಯೇ ಬೆಳಗ್ಗೆ ಮನೆಯಲ್ಲಿ ಉಪಹಾರ ಸೇವಿಸಿದ ತಮ್ಮ ಕೋಣೆ ಸೇರಿದ್ದರು. ಆ ಬಳಿಕ ಅವರು ಕೋಣೆಯಿಂದ ಹೊರ ಬಂದಿರಲಿಲ್ಲ‌. ಸಂಜೆಯವರೆಗೆ ಅವರು ಮಲಗುವ ಅಭ್ಯಾಸ ಇರುವ ಕಾರಣ ಮನೆಯವರು ಇತ್ತ ಕಡೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಆದರೆ ಸಂಜೆ ಬಳಿಕ ಬಾಗಿಲು ಬಡಿದರೂ ತೆಗಿದಿಲ್ಲ. ಫೋನ್ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಆದ್ದರಿಂದ ಬಾಗಿಲಿನ ಸದಿಯಿಂದ ನೋಡಿದಾಗ ನಿಖಿಲ್ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಆತನಿಗೆ ಆರ್ಥಿಕ ಹೊರೆಯಿತ್ತು. ಬೇರೆ ಬೇರೆ ಆ್ಯಪ್‌ಗಳಲ್ಲಿ ಆತ ಸಾಲ ಪಡೆದಿದ್ದು, ಗಮನಕ್ಕೆ ಬಂದಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!