Thursday, June 4, 2026
Homeಕರಾವಳಿಮಂಗಳೂರುಮಂಗಳೂರಿನ ಅನನ್ಯರಾವ್ ಭಾರತೀಯ ನೌಕಾ ಪಡೆಯ ಸಬ್ ಲೆಫ್ಟಿಂನೆಂಟ್ ಆಗಿ ನೇಮಕ

ಮಂಗಳೂರಿನ ಅನನ್ಯರಾವ್ ಭಾರತೀಯ ನೌಕಾ ಪಡೆಯ ಸಬ್ ಲೆಫ್ಟಿಂನೆಂಟ್ ಆಗಿ ನೇಮಕ

- Advertisement -
- Advertisement -

ಮಂಗಳೂರಿನ ಅನನ್ಯರಾವ್ ಭಾರತೀಯ ನೌಕಾ ಪಡೆಯ ಸಬ್ ಲೆಫ್ಟಿಂನೆಂಟ್ ಆಗಿ ನೇಮಕವಾಗಿದ್ದಾರೆ. ಅನನ್ಯ ರಾವ್

ಎನ್ ಐಟಿಕೆ ಹಳೆಯ ವಿದ್ಯಾರ್ಥಿ ಹಾಗೂ NCC ಕೆಡೆಟ್ ಸಬ್ ಲೆಫ್ಟಿನೆಂಟ್ ಆಗಿದ್ದಾರೆ.


ಎಳಿಮಲದ ಭಾರತೀಯ ನೌಕಾ ಅಕಾಡೆಮಿಯಲ್ಲಿ 10 ತಿಂಗಳ ತೀವ್ರ ಮಿಲಿಟರಿ ತರಬೇತಿ ಕಾರ್ಯಕ್ರಮದ ನಂತರ, ಮೇ 31, 2025 ರಂದು ನಡೆದ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಅನನ್ಯ ಅವರನ್ನು ಔಪಚಾರಿಕವಾಗಿ ನೌಕಾಪಡೆಗೆ ಸೇರಿಸಲಾಯಿತು.

ನಿವೃತ್ತ ಟೆಲಿಕಾಂ ಉದ್ಯೋಗಿ ಸತೀಶ್ ರಾವ್ ಮತ್ತು ವೀಣಾ ದಂಪತಿ ಪುತ್ರಿ ಅನನ್ಯಾ ರಾವ್ ಎಲ್ ಕೆಜಿಯಿಂದ ಎಸ್ಸೆಸೆಲ್ಸಿವರೆಗೆ ಬಿಜಿಎಸ್ ಕಾವೂರ್ ನಲ್ಲಿ ವಿದ್ಯಾಭ್ಯಾಸ ಮಾಡಿ, ಬಳಿಕ ಪಿಯುಸಿ ಚೈತನ್ಯ ಕಾಲೇಜು, ಬಿಟೆಕ್  ಪದವಿಯನ್ನು ಸುರತ್ಕಲ್ ನಿಂದ ಎನ್ ಐಟಿಕೆಯಿಂದ ಮೆಕಾನಿಕಲ್ ವಿಭಾಗದಲ್ಲಿ ಅಧ್ಯಯನ ಮಾಡಿದ್ದಾರೆ. ಬಾಲ್ಯದಿಂದ ದೇಶ ಸೇವೆಯಲ್ಲಿ ಅಭಿರುಚಿ ಇದ್ದು ಭಾರತೀಯ ಸೈನ್ಯ ಸೇರಬೇಕೆಂಬ ಹಂಬಲ ಅದಕ್ಕಾಗಿ ಕಾಲೇಜುನಲ್ಲಿ NCC ತರಬೇತಿ ಪಡೆದಿದ್ದರು. ಎನ್ ಐಟಿಕೆ ಸುರತ್ಕಲ್ ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ಸೇನಾ ನೇಮಕಾತಿ ಪರೀಕ್ಷೆಯ ಮೂಲಕ ಆಯ್ಕೆಗೊಂಡು 10 ತಿಂಗಳ ತರಬೇತಿ ಪಡೆದು ಇತ್ತೀಚೆಗೆ ಸಬ್ ಲೆಫ್ಟಿಂನೆಂಟ್ ಆಗಿ ಆಯ್ಕೆಗೊಂಡಿದ್ದಾರೆ.

ಅನನ್ಯ ಅವರ ತಂದೆ ಸತೀಶ್ ರಾವ್ ಅವರು ದಿವ್ಯಾಂಗರ ಸಬಲೀಕರಣಕ್ಕೆ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಸಂಘಟನೆ ಸಕ್ಷಮದ ಜಿಲ್ಲಾ ಖಜಾಂಜಿ ಆಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

.

- Advertisement -

Latest News

error: Content is protected !!