ಶಿವಮೊಗ್ಗ: ಕಾಂತಾರ ಚಿತ್ರ ತಂಡಕ್ಕೆ ಕಾದಿದ್ಯಾ ಬಹುದೊಡ್ಡ ಗಂಡಾಂತರ ಅನುಮಾನ ಕಾಡೋದಕ್ಕೆ ಶುರುವಾಗಿದೆ. ಸಿನಿಮಾ ತಂಡದ ಸಾಲು ಸಾಲು ಕಲಾವಿದರ ಸಾವಾಗುತ್ತಿರೋದು ಆತಂಕ ಮೂಡಿಸಿದೆ.
ರಾಕೇಶ್ ಪೂಜಾರಿ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಕಾಂತಾರ ಚಾಪ್ಟರ್ 1 ನಲ್ಲಿ ಅಭಿನಯಿಸುತ್ತಿದ್ದ ಕೇರಳ ಮೂಲದ ಮಿಮಿಕ್ರಿ ಕಲಾವಿದ ವಿಜು.ವಿ.ಕೆ ನಿಧನರಾಗಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿಯ ಆಗುಂಬೆಯಲ್ಲಿ ವಿಜು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇವರು ಕೇರಳದ ತ್ರಿಶೂರ್ನವರು. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟ್ಗಾಗಿ ಅವರು ಶಿವಮೊಗಕ್ಕೆ ಬಂದಿದ್ದರು. ಆಗುಂಬೆಯ ಸಮೀಪದ ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದರು. ಜೂನ್ 11ರಂದು ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನ ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ನಿಧನ ಹೊಂದಿದ್ದಾರೆ. ಕೇರಳದಿಂದ ಕುಟುಂಬಸ್ಥರು ಬಂದ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ.
ಕಾಂತಾರದಲ್ಲಿ ಅಭಿನಯಿಸುತ್ತಿದ್ದ ರಾಕೇಶ್ ಪೂಜಾರಿ ನಿಧನಕ್ಕೂ ಕೆಲವು ದಿನಗಳ ಹಿಂದೆ ಕಾಂತಾರ ಚಾಪ್ಟರ್ 1 ರ ಸಹ ನಟ ಕಪಿಲ್ ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಮುಳುಗಿ ಎಂಬುವರು ಸಾವನ್ನಪ್ಪಿದ್ದರು.ಇದೀಗ ಮತ್ತೊಬ್ಬ ಕಲಾವಿದ ಸಾವನ್ನಪ್ಪಿರೋದು ಆತಂಕ ಮೂಡಿಸಿದೆ. 35 ದಿನದಲ್ಲಿ ಮೂವರು ಕಲಾವಿದರು ಸಾವನ್ನಪ್ಪಿರೋದು ಆತಂಕ ಮೂಡಿಸಿದೆ.