Friday, June 5, 2026
Homeಕರಾವಳಿಮಂಗಳೂರುಕಡಬ; ನ್ಯಾಯವಾದಿ ಅಕ್ಷಯ್ ನಾಗೋಜಿ ಯವರ ನೂತನ ಕಚೇರಿ ಉದ್ಘಾಟನೆ

ಕಡಬ; ನ್ಯಾಯವಾದಿ ಅಕ್ಷಯ್ ನಾಗೋಜಿ ಯವರ ನೂತನ ಕಚೇರಿ ಉದ್ಘಾಟನೆ

- Advertisement -
- Advertisement -

ಕಡಬ; ಕಡಬ ತಾಲೂಕಿನ ಪಂಜ ರಸ್ತೆ, ಯೋಗಕ್ಷೇಮ ಸಂಕೀರ್ಣಧ ಪ್ರಥಮ ಮಹಡಿಯಲ್ಲಿ ನ್ಯಾಯವಾದಿ ಅಕ್ಷಯ್ ನಾಗೋಜಿ ಯವರ ನೂತನ ಕಚೇರಿ ಜ್ಯೇಷ್ಠ ಲಾ ಚೇಂಬರ್ ಉದ್ಘಾಟನೆಗೊಂಡಿದೆ. ಜೂನ್ 9 ಸೋಮವಾರದಂದು ನಿವೃತ್ತ ಶಿಕ್ಷಕರಾದ ಪೆರ್ಗಡೆ ಗೌಡ ದೇರಾಜೆ ಅವರು ನೂತನ ಕಚೇರಿಯನ್ನು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ  ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ  ಪಿ.ಪಿ ವರ್ಗೀಸ್, ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಸಹ್ಯದ್ ಮೀರಾ ಸಾಹೇಬ್, ಕಡಬ ಸಿ.ಎ ಬ್ಯಾಂಕಿನ ಅಧ್ಯಕ್ಷರಾದ ರಮೇಶ್ ಕಲ್ಪುರೆ, ಉಪಾಧ್ಯಕ್ಷರಾದ ಗಿರೀಶ್, ಕಡಬ ದ ಉದ್ಯಮಿಗಳಾದ ಕಿಶನ್ ರೈ, ದಯಾನಂದ ಅರಿಗ ಹಾಗೂ ಎನ್ ವಿಠಲ ಗೌಡ ನಾಗೋಜಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಕಡಬ ಸಿ ಎ ಬ್ಯಾಂಕಿನ ನಿರ್ದೇಶಕರು,ಸಿ ಎ ಬ್ಯಾಂಕಿನ ಸಿಬ್ಬಂದಿ ವರ್ಗ, ಪ್ರಮುಖರಾದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗಣೇಶ್ ಕೈಕುರೆ, ಡಾ. ಅನಿಲ್ ಈಶೋ ಸೇರಿದಂತೆ ಊರಿನ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಪೆರ್ಗಡೆ ಗೌಡ ದೇರಾಜೆ, ರಮೇಶ್ ಕಲ್ಪುರೆ, ತೋಮಸ್ ಇಡಯಾಲ್, ಸದಾನಂದ ಗೌಡ ಇವರನ್ನು ಸನ್ಮಾನಿಸಲಾಯಿತು. ನ್ಯಾಯವಾದಿ ಅಕ್ಷಯ್ ನಾಗೋಜಿ ಸ್ವಾಗತಿಸಿ, ರಕ್ಷಿತಾ ಎ.ಜಿ ರವರು ವಂದಿಸಿದರು. ನ್ಯಾಯವಾದಿ  ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.

- Advertisement -

Latest News

error: Content is protected !!