Monday, June 8, 2026
Homeಕರಾವಳಿಮಂಗಳೂರು ಬಂಟ್ವಾಳ: ಪುತ್ತೂರು ನಗರಸಭಾ ಸದಸ್ಯ ರಮೇಶ್‌ ರೈ ನೆಲ್ಲಿಕಟ್ಟೆ ಸಾವು ಪ್ರಕರಣ; ತಂದೆಗೆ ಬಂದ ಕರೆಗಳ...

 ಬಂಟ್ವಾಳ: ಪುತ್ತೂರು ನಗರಸಭಾ ಸದಸ್ಯ ರಮೇಶ್‌ ರೈ ನೆಲ್ಲಿಕಟ್ಟೆ ಸಾವು ಪ್ರಕರಣ; ತಂದೆಗೆ ಬಂದ ಕರೆಗಳ ಬಗ್ಗೆ ತನಿಖೆ ನಡೆಸುವಂತೆ ಮಗನಿಂದ ದೂರು

- Advertisement -
- Advertisement -

ಬಂಟ್ವಾಳ: ಪುತ್ತೂರು ನಗರಸಭಾ ಸದಸ್ಯ ರಮೇಶ್‌ ರೈ ನೆಲ್ಲಿಕಟ್ಟೆ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ತಂದೆಗೆ ಬಂದ ಕರೆಗಳ ಬಗ್ಗೆ ತನಿಖೆ ನಡೆಸುವಂತೆ ರಮೇಶ್ ರೈ ಮಗ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ರಮೇಶ್‌ ರೈ ಅವರ ಬೈಕ್‌ ಹಾಗೂ ಇತರ ಸೊತ್ತುಗಳು ಪಾಣೆಮಂಗಳೂರು ಹಳೆ ಸೇತುವೆಯ ಬಳಿ ಪತ್ತೆಯಾಗಿದ್ದು, ಬಳಿಕ ಅವರ ಮೃತದೇಹ ನದಿಗೆ ತಾಗಿಕೊಂಡು ನಿರ್ಮಾಣವಾದ ಟ್ಯಾಂಕ್‌ ಮಾದರಿಯ ಜಾಕ್‌ ವೆಲ್‌ನಲ್ಲಿ ಪತ್ತೆಯಾಗಿತ್ತು. ಅವರ ಸಾವಿನ ಕುರಿತು ಸಂಶಯಗಳಿದ್ದು, ಅವರಿಗೆ ಬರುತ್ತಿದ್ದ ಕರೆಗಳನ್ನು ತನಿಖೆ ಮಾಡಬೇಕು ಎಂದು ಪುತ್ರ ದೂರಿನಲ್ಲಿ ತಿಳಿಸಿದ್ದಾರೆ. ನಗರ ಪೊಲೀಸರು ಪ್ರಕರಣ ದಾಖಲಿಸಿ ಮೊಬೈಲ್‌ನ ಸಿಮ್‌ ಅನ್ನು ತಾಂತ್ರಿಕ ವಿಭಾಗದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!