Thursday, June 4, 2026
Homeಕರಾವಳಿಮಂಗಳೂರುಕಡಬ: ಪೊಲೀಸರನ್ನು ಉದ್ದೇಶಿಸಿ ದ್ವೇಷದ ಭಾಷಣ ಮಾಡಿದ ವಿ.ಹಿ.ಪ.ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ವಿರುದ್ಧ ಪ್ರಕರಣ...

ಕಡಬ: ಪೊಲೀಸರನ್ನು ಉದ್ದೇಶಿಸಿ ದ್ವೇಷದ ಭಾಷಣ ಮಾಡಿದ ವಿ.ಹಿ.ಪ.ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಕಡಬ: ಪೊಲೀಸರನ್ನು ಉದ್ದೇಶಿಸಿ ದ್ವೇಷದ ಭಾಷಣ ಮಾಡಿದ ವಿ.ಹಿ.ಪ.ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ದಿನಾಂಕ: 04.06.2025 ರಂದು ಸಂಜೆ ಧಾರ್ಮಿಕ ಸಂಘಟನೆಗಳ ಪ್ರಮುಖರುಗಳು, ಕಡಬ ಪೊಲೀಸ್ ಠಾಣೆಯ ಬಳಿ ಕಡಬ – ಸುಬ್ರಹ್ಮಣ್ಯ ರಸ್ತೆಯಿಂದ ಕಡಬ ಪೊಲೀಸ್ ಠಾಣೆಗೆ ಬರುವ ರಸ್ತೆಯಲ್ಲಿ ನಿಂತು, ನವೀನ್ ನೆರಿಯ ಅವರು ಪೊಲೀಸರನ್ನು ಉದ್ದೇಶಿಸಿ ದ್ವೇಷದ ಭಾಷಣವನ್ನು ಮಾಡಿದ್ದಾರೆ ಹಾಗೂ ತನ್ನ ಭಾಷಣದ ವೇಳೆ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಚೋದನಕಾರಿ ಮಾತನಾಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿರುವುದರಿಂದ ಅವರ ವಿರುದ್ದ ದಿನಾಂಕ: 04.06.2025 ರಂದು ಕಡಬ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!