Sunday, June 14, 2026
Homeಕರಾವಳಿಮಂಗಳೂರಿನ ಅಪಾರ್ಟ್‌ ಮೆಂಟ್‌ ವೊಂದರಲ್ಲಿ ಅಗ್ನಿ ಅವಘಡ; ಕಟ್ಟಡದಲ್ಲಿ ಸಿಲುಕಿದ್ದ ಅಸ್ವಸ್ಥ ವೃದ್ಧರೊಬ್ಬರ ರಕ್ಷಣೆ

ಮಂಗಳೂರಿನ ಅಪಾರ್ಟ್‌ ಮೆಂಟ್‌ ವೊಂದರಲ್ಲಿ ಅಗ್ನಿ ಅವಘಡ; ಕಟ್ಟಡದಲ್ಲಿ ಸಿಲುಕಿದ್ದ ಅಸ್ವಸ್ಥ ವೃದ್ಧರೊಬ್ಬರ ರಕ್ಷಣೆ

- Advertisement -
- Advertisement -

ಮಂಗಳೂರು: ಇಲ್ಲಿಯ ಕುದ್ರೋಳಿಯ ಶಿವಗಿರಿ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಕಟ್ಟಡದಲ್ಲಿ ಸಿಲುಕಿದ್ದ ಅಸ್ವಸ್ಥ ವೃದ್ಧರೊಬ್ಬರನ್ನು ರಕ್ಷಿಸಲಾಗಿದೆ.

ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕಟ್ಟಡ ಪೂರ್ತಿ ಹೊಗೆಯಿಂದ ಆವರಿಸಿಕೊಂಡಿತ್ತು.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದೌಡಾಯಿಸಿ, ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಮಾಡಿದ್ದು, ಅಗ್ನಿಶಾಮಕ ದಳದವರ ಸಮಯಪ್ರಜ್ಞೆಯಿಂದ ಕಟ್ಟಡದಲ್ಲಿ ಸಿಲುಕಿದ್ದ ಅಸ್ವಸ್ಥ ವೃದ್ಧರೊಬ್ಬರ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಹೊತ್ತೊಕೊಳ್ಳಲು ಕಾರಣವೇನು ಎಂದು ತಿಳಿದು ಬರಬೇಕಿದೆ.

- Advertisement -

Latest News

error: Content is protected !!