Monday, June 15, 2026
Homeಕರಾವಳಿಉಡುಪಿದಕ್ಷಿಣಕನ್ನಡದಲ್ಲಿಂದು 89 ಕೊರೊನಾ ಪ್ರಕರಣ ಪತ್ತೆ, ಒಂದೇ ದಿನ 5 ಮಂದಿ ಕೋವಿಡ್ ಗೆ ಬಲಿ,...

ದಕ್ಷಿಣಕನ್ನಡದಲ್ಲಿಂದು 89 ಕೊರೊನಾ ಪ್ರಕರಣ ಪತ್ತೆ, ಒಂದೇ ದಿನ 5 ಮಂದಿ ಕೋವಿಡ್ ಗೆ ಬಲಿ, ಉಡುಪಿಯಲ್ಲಿ 98 ಮಂದಿಗೆ ಸೋಂಕು

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇವತ್ತು 89 ಕೊರೊನಾ ಹೊಸ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 3680 ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು ಒಂದೇ ದಿನ 5 ಮಂದಿಯನ್ನು ಹೆಮ್ಮಾರಿ ತನಗೆ ಬಲಿಯಾಗಿಸಿಕೊಂಡಿದೆ. ಆ ಮೂಲಕ ಇದುವರೆಗೆ ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 68ಕ್ಕೆ ಏರಿಕೆಯಾಗಿದೆ.

ಸದ್ಯ ದಕ್ಷಿಣಕನ್ನಡದಲ್ಲಿ 2459 ಸಕ್ರೀಯ ಪ್ರಕರಣಗಳಿದ್ದು ಇದುವರೆಗೂ 1151 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಹಾಗೇ ಉಡುಪಿಯಲ್ಲಿ ಇಂದು ಬರೋಬ್ಬರಿ 98 ಕೋವಿಡ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 2321ಕ್ಕೆ ಏರಿಕೆಯಾಗಿದೆ. ಇನ್ನು ಇವತ್ತು ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 694 ಸಕ್ರೀಯ ಪ್ರಕರಣಗಳಿದ್ದು, ಇದುವೆರಗೂ 1617 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

- Advertisement -

Latest News

error: Content is protected !!