Friday, June 5, 2026
Homeಅಪರಾಧಇನ್ನು ಮುಂದೆ ಹೆಣ್ಣು ಮಕ್ಕಳು ವ್ಯಾನಿಟಿ ಬ್ಯಾಗ್‌ನಲ್ಲಿ ಚೂರಿಯಿಟ್ಟುಕೊಳ್ಳಿ; ಉಗ್ರರ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ ಕಲ್ಲಡ್ಕ ಪ್ರಭಾಕರ್‌...

ಇನ್ನು ಮುಂದೆ ಹೆಣ್ಣು ಮಕ್ಕಳು ವ್ಯಾನಿಟಿ ಬ್ಯಾಗ್‌ನಲ್ಲಿ ಚೂರಿಯಿಟ್ಟುಕೊಳ್ಳಿ; ಉಗ್ರರ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದ ಕಲ್ಲಡ್ಕ ಪ್ರಭಾಕರ್‌ ಭಟ್‌ 

- Advertisement -
- Advertisement -

ಮಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ ಉಗ್ರರ ದಾಳಿ ಖಂಡನೀಯವಾಗಿದ್ದು, ಇದೊಂದು ಘೋರವಾದ ಕೃತ್ಯವಾಗಿದೆ. ಇನ್ನು ಮುಂದೆ ಹೆಣ್ಣು ಮಕ್ಕಳು ತಮ್ಮ ತಮ್ಮ ವ್ಯಾನಿಟಿ ಬ್ಯಾಗ್‌ನಲ್ಲಿ ಚೂರಿಯನ್ನಿಟ್ಟುಕೊಂಡು ಓಡಾಡಿ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಹೇಳಿಕೆ ನೀಡಿದ್ದಾರೆ. 

ಅವರು ಮಂಗಳವಾರದಂದು ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಜಮ್ಮು-ಕಾಶ್ಮೀರದ ಪಹಲ್ಗಾಮ್‌ ಉಗ್ರರ ದಾಳಿ ಖಂಡಿಸಿ  ಮಾತನಾಡಿದರು.

ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಅಲಂಕಾರಿಕ ವಸ್ತುಗಳನ್ನಿಟ್ಟುಕೊಳ್ಳುವ ಬದಲಾಗಿ ಆರು ಇಂಚಿನ ಚಾಕು ಇಟ್ಟುಕೊಳ್ಳಿ. ಅದಕ್ಕೆ ಯಾವುದೇ ಲೈಸೆನ್ಸ್‌ ಬೇಕಿಲ್ಲ. ಮೊನ್ನೆ ನಡೆದ ಪಹಲ್ಗಾಮ್‌ ದಾಳಿಯ ವೇಳೆ ಉಗ್ರರಿಗಡ ನಮ್ಮ ಹಿಂದೂಗಳು ಕೇವಲ ಒಂದು ತಲ್ವಾರ್‌ ತೋರಿಸಿದರೆ ಸಾಕಿತ್ತು. ನಂತರದಲ್ಲಿ ಅಲ್ಲಿ ನಡೆಯುವ ಕಥೆಯೇ ಬೇರೆ ಆಗುತ್ತಿತ್ತು,’ ಎಂದರು. 

- Advertisement -

Latest News

error: Content is protected !!