Wednesday, June 3, 2026
Homeತಾಜಾ ಸುದ್ದಿ ನೀರು ಬೆರೆಸದೇ ಮದ್ಯ ಕುಡಿಯುವ ಛಾಲೆಂಜ್ ಹಾಕಿದ ಯುವಕ; 5  ಬಾಟಲ್ ಮದ್ಯ ಕುಡಿದು ಸಾವು

 ನೀರು ಬೆರೆಸದೇ ಮದ್ಯ ಕುಡಿಯುವ ಛಾಲೆಂಜ್ ಹಾಕಿದ ಯುವಕ; 5  ಬಾಟಲ್ ಮದ್ಯ ಕುಡಿದು ಸಾವು

- Advertisement -
- Advertisement -

ಕೋಲಾರ;  ನೀರು ಬೆರೆಸದೇ ಮದ್ಯ ಕುಡಿಯುವ ಛಾಲೆಂಜ್ ಹಾಕಿದ ಯುವಕ 5  ಬಾಟಲ್ ಮದ್ಯ ಕುಡಿದು ಸಾವನ್ನಪ್ಪಿದ ಘಟನೆ ಕೋಲಾರದಲ್ಲಿ ನಡೆದಿದೆ. ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯ ಕಾರ್ತಿಕ್ ಮೃತ ಯುವಕ.

 ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯ ಕಾರ್ತಿಕ್ ತನ್ನ ಸ್ನೇಹಿತರ ಜೊತೆ ಚಾಲೆಂಜ್ ಹಾಕಿ ಬೆಟ್ಸ್ ಕಟ್ಟಿದ್ದನು. ನಾನು ನೀರು ಬೆರೆಸದೇ 5 ಬಾಟಲಿ ಎಣ್ಣೆ ಹೊಡೆಯುತ್ತೇನೆ ಎಂದಿದ್ದನು.ಅದರಂತೆ 5 ಬಾಟಲ್ ಮದ್ಯ ಸೇವಿಸಿದ ಕಾರ್ತಿಕ್ ಅಸ್ವಸ್ಥಗೊಂಡಿದ್ದನು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ. ನುಂಗಲಿ ಪೊಲೀಸ್‌ ಠಾಣೆಯಲ್ಲಿ ಕಾರ್ತಿಕ್ ಸ್ನೇಹಿತರ ವಿರುದ್ಧ ದೂರು ದಾಖಲಾಗಿದೆ. 10 ದಿನಗಳಷ್ಟೇ ಈತನ ಪತ್ನಿ ಮಗುವಿಗೆ ಜನ್ಮ ನೀಡಿದ್ದಳು ಎನ್ನಲಾಗಿದೆ.

- Advertisement -

Latest News

error: Content is protected !!