ಮಂಗಳೂರು: ಕಡಲನಗರಿಯಲ್ಲಿ ಜಾಗತಿಕ ಸಂಸ್ಥೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಗರದ ಬ್ಲೂಬೆರಿ ಹಿಲ್ಸ್‌ನಲ್ಲಿರುವ ಕಿಯೋನಿಕ್ಸ್‌ನ 3.5 ಎಕ್ರೆ ಜಾಗದಲ್ಲಿ ಇನ್ನೇರಡು ತಿಂಗಳಲ್ಲಿ ಮಂಗಳೂರು ಐಟಿ ಪಾರ್ಕ್ ನಿರ್ಮಿಸಲಾಗುವುದು ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
ಅವರು ನಗರದಲ್ಲಿ ಹಮ್ಮಿಕೊಂಡಿದ್ದ ವರ್ಟೆಕ್ಸ್ ವರ್ಕ್ಸ್ಸ್ಪೇಸ್ ವತಿಯಿಂದ ಕದ್ರಿಯ ವರ್ಟೆಕ್ಸ್ ಫೈವ್‌ನಲ್ಲಿ ಹಮ್ಮಿಕೊಂಡ ಟೆಕ್‌ವೇವ್ಸ್: ರೈಸ್ ಆಫ್ ದಿ ಸಿಲಿಕಾನ್ ಬೀಚ್ ಆಫ್ ಇಂಡಿಯಾ’ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಂಗಳೂರಿನಲ್ಲೂ ಜಾಗತಿಕ ಸಾಮರ್ಥ್ಯ ಕೇಂದ್ರಗಳು ತಲೆ ಎತ್ತುತ್ತಿದ್ದು, ಐಟಿ ಪಾರ್ಕ್‌ನಲ್ಲಿ ದೊಡ್ಡ ಜಿಸಿಸಿಗಳ ಬದಲು 30-40ರಷ್ಟು ಅತಿ ಸಣ್ಣ ಹಾಗೂ ಕಿರು ಗಾತ್ರದ ಜಿಸಿಸಿಗಳಿಗೇ ಆದ್ಯತೆ ನೀಡಲಾಗಿದೆ. ಈ ತಿಂಗಳೊಳಗೆ ಮಾಸಾಂತ್ಯ ಟೆಂಡರ್ ಕರೆದು ಜೂನ್ ವೇಳೆಗೆ ಭೂಮಿ ಪೂಜೆ ನೆರವೇರಿಸಿ, 2 ವರ್ಷದೊಳಗೆ ಐಟಿ ಪಾರ್ಕ್ ಕಾರ್ಯಾಚರಣೆ ಆರಂಭಿಸಬೇಕು,’ ಎನ್ನುವ ಯೋಜನೆ ನಮ್ಮದು ಎಂದರು.
ಈ ಸಂದರ್ಭದಲ್ಲಿ ಸಂಸದ ಕ್ಯಾ|ಬ್ರಿಜೇಶ್ ಚೌಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಕೋಕಿ ಕಾಟೊ (ಕೊಬಯಾಶಿ ಕ್ರಿಯೇಟ್ ಇಂಡಿಯಾ), ತಕಾಶಿ ಮಿಯಾಸಾಕಾ (ನಿಡೆಕ್ ಅಡ್ವಾನ್ಸ್ ಟೆಕ್ನಾಲಜಿ), ಜಗತ್ ಬಿದ್ದಪ್ಪ ಮತ್ತು ನವಜಿತ್ ಕರ್ಕೇರಾ (ಸೋನಿಕ್ ಲ್ಯಾಂಬ್) ಮತ್ತು ಯೂನಿಫೆ ಸಿಎಕ್ಸ್ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನ ಮುಖಂಡರನ್ನು ಗುರುತಿಸಿ ಗೌರವಿಸಲಾಯಿತು.


