Friday, June 5, 2026
Homeಅಪರಾಧಮುತ್ತಪ್ಪ ರೈ ಪುತ್ರನ ಶೂಟೌಟ್‌ ಪ್ರಕರಣ; ರಿಕ್ಕಿ ರೈ ಅಂಗರಕ್ಷಕನ ಸೆರೆ

ಮುತ್ತಪ್ಪ ರೈ ಪುತ್ರನ ಶೂಟೌಟ್‌ ಪ್ರಕರಣ; ರಿಕ್ಕಿ ರೈ ಅಂಗರಕ್ಷಕನ ಸೆರೆ

- Advertisement -
- Advertisement -

ರಾಮನಗರ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಕೆಲ ದಿನಗಳ ಹಿಂದೆ ಗನ್ ಶೂಟ್ ನಡೆದಿದ್ದು, ಇದೀಗ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿ ಅಂಗರಕ್ಷಕ ಮೋನಪ್ಪ ವಿಠಲ ಎಂಬವರನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ.

22ರಂದು ಮೋನಪ್ಪನನ್ನು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ಆ ವೇಳೆಯಲ್ಲಿ ಆತ ಎದೆ ನೋವು ಎಂದಿದ್ದು ಆಗ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡ ಕಾರಣಕ್ಕಾಗಿ ಅವನನನ್ನು ಬಂಧಿಸಿ ರಾಮನಗರ ಜೆಎಂಎಫ್‌ಸಿ ನ್ಯಾಯಾ ಲಯಕ್ಕೆ ಹಾಜರು ಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಅಂಗರಕ್ಷಕ ಮೋನಪ್ಪ ವಿಠಲ ಅವರನ್ನು ಬಂಧಿಸಲು ಮುಖ್ಯ ಕಾರಣ ಆತನಲ್ಲಿದ್ದ ಬಂದೂಕು ಹಾಗೂ ಆತನ ನಡೆವಳಿಕೆ ಎಂದು ತಿಳಿದು ಬಂದಿದೆ. ಈತನಲ್ಲಿದ್ದ ಗುಂಡುಗಳಲ್ಲಿ ವ್ಯತ್ಯಾಸವಾ ಗಿದ್ದು, ಈತನ ನಡವಳಿಕೆ ಬಗ್ಗೆ ಸಂಶಯ ಬಂದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

- Advertisement -

Latest News

error: Content is protected !!