Monday, June 8, 2026
Homeಕರಾವಳಿಮಂಗಳೂರುಬಂಟ್ವಾಳ; ಬಸ್ ಕಂಡೆಕ್ಟರ್ ನಿಂದ ಮಹಿಳೆ ಮೇಲೆ ಹಲ್ಲೆ ಆರೋಪ

ಬಂಟ್ವಾಳ; ಬಸ್ ಕಂಡೆಕ್ಟರ್ ನಿಂದ ಮಹಿಳೆ ಮೇಲೆ ಹಲ್ಲೆ ಆರೋಪ

- Advertisement -
- Advertisement -

ಬಂಟ್ವಾಳ; ಬಸ್ ಕಂಡೆಕ್ಟರ್ ಒಬ್ಬರು ಮಗವೊಂದಕ್ಕೆ ಟಿಕೆಟ್  ತೆಗೆದುಕೊಳ್ಳುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಹಿಳೆಗೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಗುರುವಾರ ರಾತ್ರಿ ಮಗುವೊಂದಕ್ಕೆ ಟಿಕೆಟ್‌ ತೆಗೆದುಕೊಳ್ಳುವ ವಿಚಾರದಲ್ಲಿ ಮಗುವಿನ ತಾಯಿ ಹಾಗೂ  ನಿರ್ವಾಹಕ ನಡುವೆ ವಾಗ್ವಾದ ನಡೆದಿದ್ದು, ಕಂಡೆಕ್ಟರ್ ಟಿಕೆಟ್‌ ನೀಡುವ ಯಂತ್ರದಲ್ಲಿ ಮಹಿಳೆಗೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವಾಗ್ವಾದ ನಡೆದಿದೆ.  

ಬಸ್ಸನ್ನು ನಿಲ್ಲಿಸಿ ಪೊಲೀಸರಿಗೆ ದೂರನ್ನು ನೀಡುತ್ತೇನೆ ಎಂದು ಮಹಿಳೆ ಆಗ್ರಹಿಸಿದಾಗ ಚಾಲಕ ಬಸ್ಸನ್ನು ನಿಲ್ಲಿಸಲಿಲ್ಲ. ನಂತರ ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ನೀಡಿದರು.ಬಂಟ್ವಾಳ ನಗರ ಠಾಣಾ ಪಿಎಸ್‌ಐ ರಾಮಕೃಷ್ಣ ಹಾಗೂ ಸಿಬ್ಬಂದಿ ಬಸ್ಸನ್ನು ಬಿ.ಸಿ.ರೋಡು ನಿಲ್ದಾಣದಲ್ಲಿ ನಿಲ್ಲಿಸಿ ನಂತರ ವಿಚಾರಣೆ ಮಾಡಿದರು ಎನ್ನಲಾಗಿದೆ.

- Advertisement -

Latest News

error: Content is protected !!