Thursday, June 4, 2026
Homeತಾಜಾ ಸುದ್ದಿಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ: ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಸಹಾಯವಾಣಿ ತೆರೆದ ಪ್ರವಾಸೋದ್ಯಮ ಇಲಾಖೆ

ಪಹಲ್ಗಾಮ್ ನಲ್ಲಿ ಉಗ್ರ ದಾಳಿ ಹಿನ್ನೆಲೆ: ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಸಹಾಯವಾಣಿ ತೆರೆದ ಪ್ರವಾಸೋದ್ಯಮ ಇಲಾಖೆ

- Advertisement -
- Advertisement -

ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ರಾಜ್ಯದಿಂದ ತೆರಳಿರುವ ಪ್ರವಾಸಿಗರ ಸಹಾಯಕ್ಕಾಗಿ ಕರ್ನಾಟಕ ಸರ್ಕಾರದಿಂದ ಹೆಲ್ಪ್ ಲೈನ್ ತೆರೆಯಲಾಗಿದೆ.

ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸಹಾಯವಾಣಿ ತೆರೆಯಲಾಗಿದ್ದು, 080-43344334, 080-43344335, 080-43344336 ಮತ್ತು
080-43344342 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಕರ್ನಾಟಕದಲ್ಲಿ ಪ್ರವಾಸ ನಿರ್ವಹಿಸುತ್ತಿರುವ ಪ್ರವಾಸಿ ಆಪರೇಟರ್ಸ್ ಮತ್ತು ಟ್ರಾವೆಲ್ ಏಜೆಂಟ್ಸ್ ಮೂಲಕ ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಪ್ರಯಾಣಿಕರ ವಿವರಗಳನ್ನು ಪ್ರವಾಸಿಗರ ಸಂಬಂಧಿಕರು ಅಥವಾ ಪರಿಚಯಸ್ಥರು ಸಹಾಯವಾಣಿಗೆ ನೀಡಬೇಕು ಎಂದು ಪ್ರವಾಸೋದ್ಯಮ ಇಲಾಖೆ ಮನವಿ ಮಾಡಿದೆ.

ಈಗಾಗಲೇ ಸಚಿವ ಸಂತೋಷ್ ಲಾಡ್, ಸಂಸದ ತೇಜಸ್ವಿ ಸೂರ್ಯ ಮತ್ತು ಐಪಿಎಸ್ ಅಧಿಕಾರಿ ಆರ್. ಚೇತನ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶ್ರೀನಗರದಲ್ಲಿದ್ದು ಕನ್ನಡಿಗರ ಸುರಕ್ಷಿತ ವಾಪಸಾತಿ ಕುರಿತಾಗಿ ಕ್ರಮ ವಹಿಸಿದ್ದಾರೆ.

- Advertisement -

Latest News

error: Content is protected !!