Saturday, June 6, 2026
Homeತಾಜಾ ಸುದ್ದಿ ಬಂಟ್ವಾಳ;  ಅಮಲು ಪದಾರ್ಥ ಸೇವಿಸಿ ಕೆಎಸ್ ಆರ್ ಟಿಸಿ ಬಸ್‌ ಚಲಾಯಿಸಿದ ಚಾಲಕ; ಬೈಕ್ ಗೆ...

 ಬಂಟ್ವಾಳ;  ಅಮಲು ಪದಾರ್ಥ ಸೇವಿಸಿ ಕೆಎಸ್ ಆರ್ ಟಿಸಿ ಬಸ್‌ ಚಲಾಯಿಸಿದ ಚಾಲಕ; ಬೈಕ್ ಗೆ ಡಿಕ್ಕಿಯಾಗಿ ಇಬ್ಬರಿಗೆ ಗಾಯ

- Advertisement -
- Advertisement -

 ಬಂಟ್ವಾಳ;  ಅಮಲು ಪದಾರ್ಥ ಸೇವಿಸಿ ಚಾಲಕ ಕೆಎಸ್ ಆರ್ ಟಿಸಿ ಬಸ್‌ ಚಲಾಯಿಸಿದ ಪರಿಣಾಮ ಬೈಕ್ ಗೆ ಡಿಕ್ಕಿಯಾಗಿ ಇಬ್ಬರಿಗೆ ಗಾಯಗಲಾಗಿರುವ ಘಟನೆ ಬಂಟ್ವಾಳ ಟ್ರಾಫಿಕ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ನಡೆದಿದೆ. ದಿಲೀಪ್‌ ನದಾಫ್‌  ಅಮಲು ಪದಾರ್ಥ ಸೇವಿಸಿ ಬಸ್ ಓಡಿಸಿದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ . ಮಹಮ್ಮದ್‌ ಸುನೈಫ್‌, ಮಹಮ್ಮದ್‌ ನಿಜಾಮುದ್ದೀನ್‌ ಗಾಯಗೊಂಡವರು.

ಮಂಗಳೂರು ಕಡೆಯಿಂದ ಬಿಸಿ ರೋಡ್ ಕಡೆಗೆ ಹೋಗುತ್ತಿದ್ದ ಬೈಕ್‌ ಸವಾರರಿಬ್ಬರಿಗೆ, ತುಂಬೆಯಲ್ಲಿ ಹಿಂಬದಿಯಿಂದ ಬಂದ ಬಸ್‌ ಡಿಕ್ಕಿ ಹೊಡೆದಿದೆ. ಅಜಾಗರೂಕತೆಯ ಚಾಲನೆ, ವಿಪರೀತ ಅಮಲು ಪದಾರ್ಥ ಸೇವನೆ ಮಾಡಿದ ಬಸ್‌ ಚಾಲಕ ದಿಲೀಪ್‌ ನದಾಫ್‌ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರರಿಬ್ಬರು ಕೆಳಗೆ ಬಿದ್ದು ಅಲ್ಲಲ್ಲಿ ಗಾಯವಾಗಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಸ್‌ ಚಾಲಕನ ವರ್ತನೆ ಕುರಿತು ಸಂಶಯಗೊಂಡ ಟ್ರಾಫಿಕ್‌ ಪೊಲೀಸರು ಪರೀಕ್ಷೆ ಮಾಡಿದಾಗ ಅಮಲು ಪದಾರ್ಥ ಸೇವನೆ ಮಾಡಿರುವುದ ಕಂಡು ಬಂದಿದೆ.ಬಂಟ್ವಾಳ ಟ್ರಾಫಿಕ್‌ ಎಸ್‌.ಐ ಸುತೇಶ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.

- Advertisement -

Latest News

error: Content is protected !!