Thursday, June 4, 2026
Homeಇತರಗಾಡಿ ಮುಟ್ಟಿ ಮೈಲಿಗೆ ಮಾಡಿದ ಎಂದು ಬಟ್ಟೆ ಬಿಚ್ಚಿ ಯುವಕನ ಮೇಲೆ ಹಲ್ಲೆ...

ಗಾಡಿ ಮುಟ್ಟಿ ಮೈಲಿಗೆ ಮಾಡಿದ ಎಂದು ಬಟ್ಟೆ ಬಿಚ್ಚಿ ಯುವಕನ ಮೇಲೆ ಹಲ್ಲೆ…

- Advertisement -
- Advertisement -

ವಿಜಯಪುರ : ಆಧುನಿಕವಾಗಿ ನಾವೆಷ್ಟು ಮುಂದಕ್ಕೆ ಹೋದರೂ, ಸಮಾಜದಲ್ಲಿರುವ ಕೆಲವೊಂದು ಅನಿಷ್ಟ ಪದ್ಧತಿಗಳನ್ನು ನಮ್ಮಿಂದ ಹೊಡೆಸೋದಕ್ಕೆ ಸಾಧ್ಯವಾಗಲೇ ಇಲ್ಲ. ಜಾತಿ, ಅಸ್ಪೃಶ್ಯತೆ, ಧರ್ಮ ಇವುಗಳ ಹೆಸರಿನಲ್ಲಿ ನಡೆಯುವ ಅದೆಷ್ಟೋ ಹಿಂಸೆಗಳಿಗೆ ಮುಕ್ತಿ ನೀಡೋದಕ್ಕೆ ಸಾಧ್ಯವಾಗಿಲ್ಲ. ಇಂದಿಗೂ ಕೂಡ ಅಸ್ಪೃಶ್ಯತೆ ಹೆಸರಿನಲ್ಲಿ ಹಳ್ಳಿಗಳಲ್ಲಿ ಹಿಂಸಾಚಾರಗಳು ನಡೆಯುತ್ತಲೇ ಇವೆ.

ಇಂತಹದ್ದೇ ಘಟನೆಯೊಂದಕ್ಕೆ ಇದೀಗ ವಿಜಯಪುರ ಸಾಕ್ಷಿಯಾಗಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ನಡೆಸಲಾಗಿದೆ. ದಲಿತ ಯುವಕನೊಬ್ಬ ಗಾಡಿ ಮುಟ್ಟಿ ಮೈಲಿಗೆ ಮಾಡಿದ ಎಂಬ ಕಾರಣಕ್ಕೆ ಆತನ ಬಟ್ಟೆ ಹಲ್ಲೆ ನಡೆಸಿದ್ದಾರೆ.ಯುವಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಘಟನೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಘಟನೆ ಕುರಿತಾಗಿ ಎಸ್ಪಿಗೆ ದೂರು ಕೂಡ ನೀಡಲಾಗಿದೆ.

https://www.facebook.com/anandjay143/posts/3080013398780583

- Advertisement -

Latest News

error: Content is protected !!