Thursday, June 4, 2026
Homeಅಪರಾಧನಟಿ ಶರಣ್ಯ ಶೆಟ್ಟಿ ಹೆಸರು ಬಳಸಿ ವಂಚನೆ; ಸೈಬರ್‌ ಕ್ರೈಮ್‌ಗೆ ದೂರು ನೀಡಲು ಮುಂದಾದ ನಟಿ

ನಟಿ ಶರಣ್ಯ ಶೆಟ್ಟಿ ಹೆಸರು ಬಳಸಿ ವಂಚನೆ; ಸೈಬರ್‌ ಕ್ರೈಮ್‌ಗೆ ದೂರು ನೀಡಲು ಮುಂದಾದ ನಟಿ

- Advertisement -
- Advertisement -

ಬೆಂಗಳೂರು: ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಮಿಂಚಿದ್ದ ನಟಿ ಶರಣ್ಯ ಶೆಟ್ಟಿ ಅವರ ಹೆಸರನ್ನು ಬಳಸಿಕೊಂಡು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಅಪರಿಚಿತರು ನಕಲಿ ನಂಬರ್‌ವೊಂದನ್ನು ತೆಗೆದುಕೊಂಡು, ವಾಟ್ಸಾಪ್ ನಲ್ಲಿ ಶರಣ್ಯ ಅವರ ಫೋಟೋ ಹಾಕಿದ್ದಾರೆ. ಅಷ್ಟೇಅಲ್ಲದೆ ಟ್ರೂ ಕಾಲರ್ ನಲ್ಲಿ ಶರಣ್ಯ ಅವರ ಹೆಸರನ್ನು ಹಾಕಲಾಗಿದೆ.  

ಈ ನಂಬರ್ ಮೂಲಕ ‘ನಾನು ಶರಣ್ಯ. ನನಗೆ ಹಣದ ಅಗತ್ಯವಿದೆ’ ಎನ್ನುವ ಮೆಸೇಜ್‌ ಅನ್ನು ಮಾಡಿ ವಂಚಕರು ಹಣ ದೋಚಿದ್ದಾರೆ ಎನ್ನಲಾಗಿದೆ.

ಇನ್ನು ಸೈಬರ್‌ ವಂಚಕರ ಈ ಕೃತ್ಯ ಶರಣ್ಯ ಅವರ ಗಮನಕ್ಕೆ ಬಂದಿದ್ದು,  ನನ್ನ ಹೆಸರು ಬಳಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿದ್ದು, ಅದು ನನ್ನ ನಂಬರ್‌ ಅಲ್ಲ ಎನ್ನುವ ಮೂಲಕ ತನ್ನ ಆಪ್ತರು ಸೇರಿದಂತೆ ಹಲವರಿಗೆ ವಂಚನೆಯ ಜಾಲಕ್ಕೆ ಬಲಿಯಾಗಬೇಡಿ ಎಂದು ನಟಿ ತಿಳಿಸಿದ್ದಾರೆ.

ಇಂತಹವರ ವಿರುದ್ಧ ನಾನು ಸೈಬರ್‌ ಕ್ರೈಮ್‌ಗೆ ದೂರು ನೀಡುವುದಾಗಿ ನಟಿ ಹೇಳಿದ್ದಾರೆ.

- Advertisement -

Latest News

error: Content is protected !!