Sunday, June 7, 2026
Homeಆರಾಧನಾಶ್ರೀ ಕ್ಷೇತ್ರ ‌ಕೊಯ್ಯೂರು ಶ್ರೀ ‌ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಶ್ರೀ ಕ್ಷೇತ್ರ ‌ಕೊಯ್ಯೂರು ಶ್ರೀ ‌ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

- Advertisement -
- Advertisement -

ಬೆಳ್ತಂಗಡಿ: ಶ್ರೀ ಕ್ಷೇತ್ರ ‌ಕೊಯ್ಯೂರು ಶ್ರೀ ‌ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು 15-3-2025 ರಿಂದ 19-3-2025ರವರೆಗೆ ಸಂಭ್ರಮದಿಂದ ನಡೆಯಿತು.

18-3-2025 ರಂದು ಮೂಲಸ್ಥಾನ ‌ಗುಂಡದಿಂದ ಭಂಡಾರದ ಆಗಮನದ ವೇಳೆ ಅರಂತೊಟ್ಟು ‌ಕಟ್ಟೆಪೂಜೆಯು ವಿಶೇಷ ‌ಆಕರ್ಷಣೀಯವಾಗಿ‌‌ ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಹಿತೇಶ್ ಬಳ್ಳಾಲ್ ಕೊಯ್ಯೂರು ಗುತ್ತು ಪ್ರವೀಣ್ ಗೌಡ ಮಾವಿನಕಟ್ಟೆ ಕೊಯ್ಯೂರು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ‌ಬೆಳ್ತಂಗಡಿ ಇದರ ಅಧ್ಯಕ್ಷರಾದ ಶ್ರೀ ಸಂಪತ್ ಸುವರ್ಣ ಕಂಬಳ ಕ್ಷೇತ್ರದ ಶ್ರೀ ತ್ರಿಶಾಲ್ ಪೂಜಾರಿ ಬೋಳಾರ ಹಾಗೂ ಸಂಗೀತ ಕ್ಷೇತ್ರದ ‌ಮಹಾಬಲ ದೇವಾಡಿಗ‌ ಅರಂತೊಟ್ಟು ‌ಕೊಯ್ಯೂರು ವಿಶೇಷ ‌ಆಹ್ವಾನಿತರಾಗಿದ್ದರು.

ಅರಂತೊಟ್ಟು ‌ಕಟ್ಟೆ ಪೂಜೆಯ ಸಂದರ್ಭದಲ್ಲಿ ಚೆಂಡೆ ಸೇವೆ ಹಾಗೂ ‌ರಮ್ಯಶ್ರೀ ಅರಂತೊಟ್ಟು ಇವರ ರಚನೆಯ ಸೌಮ್ಯಶಶಿ ಗಾಯನದ ಕಾರ್ಣಿಕದ ಉಳ್ಳಾಲ್ತಿ ಹಾಡನ್ನು ಬಿಡುಗಡೆ ‌ಮಾಡಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ‌ಗುರುತಿಸಿ ಕೊಂಡ ಗಣ್ಯರನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ‌ ಸಂಧರ್ಭದಲ್ಲಿ ಅರಂತೊಟ್ಟು ‌ಕುಟುಂಸ್ಥರು ಊರ ಮಹಾನೀಯರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!