Thursday, June 4, 2026
Homeತಾಜಾ ಸುದ್ದಿಗ್ರಾಮ ಸಹಾಯಕ ಅನಾರೋಗ್ಯದಿಂದ ನಿಧನ

ಗ್ರಾಮ ಸಹಾಯಕ ಅನಾರೋಗ್ಯದಿಂದ ನಿಧನ

- Advertisement -
- Advertisement -

ತೀರ್ಥಹಳ್ಳಿ: ಇಲ್ಲಿನ ತೀರ್ಥಮುತ್ತೂರು ಗ್ರಾಮದಲ್ಲಿ ಗ್ರಾಮ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೋರ್ವ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಮೃತಪಟ್ಟ ವ್ಯಕ್ತಿ ಹೆಗ್ಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಟ್ಟಗೆರಿ ನಿವಾಸಿ ಮಧು (38 ವರ್ಷ) ಎನ್ನಲಾಗಿದೆ.

ಮಧು ಅವರು ಕಳೆದ 10 ವರ್ಷಗಳಿಂದ ಗ್ರಾಮ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
 

- Advertisement -

Latest News

error: Content is protected !!