Wednesday, June 3, 2026
Homeಕರಾವಳಿಉಡುಪಿಉಡುಪಿ : ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗವನ್ನೇ ಕೊಯ್ದು ಕೊಂಡು ವ್ಯಕ್ತಿ ಸಾವು

ಉಡುಪಿ : ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗವನ್ನೇ ಕೊಯ್ದು ಕೊಂಡು ವ್ಯಕ್ತಿ ಸಾವು

- Advertisement -
- Advertisement -

ಉಡುಪಿ : ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗವನ್ನೇ ಕೊಯ್ದು ಕೊಂಡು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರಿನ ಕಚ್ಚೂರಿನಲ್ಲಿ ನಡೆದಿದೆ.ಬಾರ್ಕೂರಿನ ಕಚ್ಚೂರು ಗ್ರಾಮದ ಸಂತೋಷ್ (42) ಮೃತ ವ್ಯಕ್ತಿ.

ವಿಪರೀತ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದ ಸಂತೋಷ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು.ಆದ್ದರಿಂದ ಕೆಲಸಕ್ಕೂ ಹೋಗದೆ ಮನೆಯಲ್ಲೇ ಇರುತ್ತಿದ್ದರು. ಭಾನುವಾರ ಮನೆಯ ಬಾತ್ ರೂಮಿನಲ್ಲಿ ರಕ್ತ ಸಿಕ್ತರಾಗಿ ಬಿದ್ದುಕೊಂಡಿದ್ದ ಸಂತೋಷ್ ಮರ್ಮಾಂಗದಿಂದ ರಕ್ತ ಸುರಿಯುತ್ತಿತ್ತು. ಕೂಡಲೇ ಚಿಕಿತ್ಸೆಗೆ ಬ್ರಹ್ಮಾವರದ ಸರಕಾರಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಸಂತೋಷ ಅವರು ಮೃತಪಟ್ಟಿರುವುದಾಗಿ ತಿಳಿಸಿದರು.ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!